ನದಿಯಲ್ಲಿ ಮುಳುಗಿ ಯುವಕ ಮೃತ್ಯು
Update: 2016-09-29 23:58 IST
ಬೆಳ್ತಂಗಡಿ, ಸೆ.29: ಸ್ನಾನಕ್ಕೆ ತೆರಳಿದ್ದ ಯುವಕನೋರ್ವ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಸವಣಾಲಿನಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಸವಣಾಲು ಗ್ರಾಮದ ಕೋಡಿ ಮುಗೇರು ನಿವಾಸಿ ದೋಗು ಎಂಬವರ ಪುತ್ರ ಪವನ್ ಕುಮಾರ್(25) ಮೃತಪಟ್ಟ ಯುವಕ. ಇವರು ಸ್ನೇಹಿತನೊಂದಿಗೆ ನದಿಗೆ ಸ್ನಾನಕ್ಕೆಂದು ಹೋದಾಗ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.