ಒಪೆಕ್ ಮಹತ್ವದ ನಿರ್ಧಾರದಿಂದ ತೈಲ ಬೆಲೆಯೇರಿಕೆ ಸಾಧ್ಯತೆ
ಕುವೈಟ್‌ಸಿಟಿ, ಸೆಪ್ಟಂಬರ್ 30: ತೈಲೋತ್ಪಾದನೆಯಲ್ಲಿ ಕಡಿತಗೊಳಿಸಲು ತೈಲ ಉತ್ಪಾದಕರಾಷ್ಟ್ರಗಳ ಸಂಘಟನೆ ಒಪೆಕ್ ತೀರ್ಮಾನಿಸಿದೆ ಎಂದು ವರದಿಯಾಗಿದೆ.
ಅಲ್ಜೀರಿಯದಲ್ಲಿ ಸೇರಿದ ವಿಶೇಷ ಸಭೆಯಲ್ಲಿ ತೈಲ ಉತ್ಪಾದನೆಯನ್ನು ಪರಿಮಿತ ಗೊಳಿಸುವ ನಿರ್ಧಾರಕ್ಕೆ ಬರಲಾಗಿದ್ದು, ತೈಲ ಉತ್ಪಾದನೆಯನ್ನು ಪ್ರತಿದಿವಸ 32.5 ರಿಂದ 33.0 ದಶಲಕ್ಷ ಬ್ಯಾರಲ್‌ಗೆ ಸೀಮಿತಗೊಳಿಸಲಾಗುವುದೆಂಬ ಸುದ್ದಿ ಬಂದೊಡನೆ ತೈಲಕ್ಕೆ ಶೇ. 5ರಷ್ಟು ದರ ಏರಿಕೆಯಾಗಿದ್ದು, ಬ್ಯಾರಲ್‌ಗೆ 48ಡಾಲರ್‌ಗೆ ತಲುಪಿದೆ. 2008ರ ಬಳಿಕ ಇದೇ ಮೊದಲಬಾರಿ ಒಪೆಕ್ ತೈಲೋತ್ಪಾದನೆ ಕಡಿತಗೊಳಿಸುತ್ತಿದೆ.
ಕತರ್ ತೈಲಸಚಿವ ಡಾ. ಮುಹಮ್ಮದ್ ಬಿನ್ ಸಾಲ ಅಲ್ ಸಾದರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಇಳಿಕೆ ಆಗುತ್ತಿರುವುದನ್ನು ತಡೆಯಲಿಕ್ಕಾಗಿ ತೈಲ ಉತ್ಪಾದನೆಯನ್ನು ನಿಯಂತ್ರಿಸುವ ನಿರ್ಧಾರ ತಳೆಯಲಾಗಿದೆ. ಉತ್ಪಾದನೆ ಕಡಿಮೆಗೊಂಡಂತೆ ತೈಲಕ್ಕೆ ಬೆಲೆಯೇರಿಕೆ ಆಗಲಿದೆ ಎಂದು ಒಪೆಕ್ ಭಾವಿಸಿದೆ. ಉತ್ಪಾದನೆ ಕಡಿಮೆ ಮಾಡುವುದರಿಂದಪ್ರತಿ ದಿವಸ7,50,000 ಬ್ಯಾರಲ್ ಕ್ರೂಡ್ ಆಯಿಲ್(ಕಚ್ಚಾ ತೈಲ) ಕಡಿಮೆ ಆಗಲಿದೆ. ಅತಿದೊಡ್ಡ ತೈಲ ಉತ್ಪಾದನೆ ರಾಷ್ಟ್ರವಾದ ಸೌದಿ ಅರೇಬಿಯ ಮತ್ತುಇರಾನ್ ತೈಲ ಉತ್ಪಾದನೆಯಲ್ಲಿ ಕಡಿತಕ್ಕೆ ಸಮ್ಮತಿಸಿದೆ. ಇರಾನ್ ತೈಲ ಉತ್ಪಾದನೆಯನ್ನು ಕಡಿಮೆ ಮಾಡುವುದಿದ್ದರೆ ತಾನು ಕೂಡಾ ಅದಕ್ಕೆ ಸಿದ್ಧ ಎಂದು ಸೌದಿ ಅರೇಬಿಯ ತಿಳಿಸಿದೆ ಎಂದು ವರದಿ ತಿಳಿಸಿದೆ.