ರಸ್ತೆ ಗುಂಡಿಯಲ್ಲಿ ಸ್ನಾನ ಮಾಡಿ ಯುವತಿಯಿಂದ ಪ್ರತಿಭಟನೆ !

Update: 2016-09-30 11:06 GMT

ಬ್ಯಾಂಕಾಕ್,ಸೆ. 30; ಕೆಟ್ಟುಹೋದ ರಸ್ತೆಯನ್ನು ರಿಪೇರಿ ಮಾಡಬೇಕೆಂದು ಪ್ರತಿಭಟನೆ ನಡೆಸುವುದು ಇಂದು ವಿಶೇಷವೇನಲ್ಲ. ಆದರೆ ರಸ್ತೆಯಲ್ಲಾಗಿರುವ ಗುಂಡಿಯಲ್ಲಿ ಸ್ನಾನ ಮಾಡಿ ಪ್ರತಿಭಟಿಸುವುದಕ್ಕೆ ಯಾರೂ ಧೈರ್ಯ ಮಾಡಲಾರರು. ಥಾಯ್ಲೆಂಡ್‌ನ ಟಾಕ್ ಎಂಬ ಪ್ರಾಂತ್ಯದಲ್ಲಿ ಪಾಂ ಎನ್ನುವ ಮಾಡೆಲ್ ಒಬ್ಬರು ರಸ್ತೆಯ ಗುಂಡಿಯಲ್ಲಿ ಸ್ನಾನಕ್ಕಿಳಿದು ವಿನೂತನವಾಗಿ ಪ್ರತಿಭಟಿಸಿದ್ದಾರೆಂದು ವರದಿಯಾಗಿದೆ.

 ಟಾಕ್ ಎಂಬಲ್ಲಿನ ತನ್ನ ಸಂಬಂಧಿಕರ ಮನೆಗೆ ಹೋಗುವಾಗ ರಸ್ತೆಯಲ್ಲಿ ಗುಂಡಿಗಳೇ ತುಂಬಿರುವುದರಿಂದ ಅವರು ನೊಂದು ರಸ್ತೆರಿಪೇರಿ ಮಾಡದ ಅಧಿಕಾರಿಗಳ ವಿರುದ್ಧ ಈ ರೀತಿ ಪ್ರತಿಭಟಿಸಿದ್ದಾರೆ. ಸ್ನಾನದ ಬಟ್ಟೆ ಮತ್ತು ಸೋಪ್ ಹಿಡಿದು ಆಕೆ ರಸ್ತೆ ಗುಂಡಿಗಿಳಿದು ಸ್ನಾನ ಮಾಡುತ್ತಿರುವ ಚಿತ್ರ ಥಾಯ್ಲೆಂಡ್ ಮತ್ತು ಚೀನದ್ಲಿ ಪ್ರಚಾರ ಆಗಿದೆ. ಪಾಂರ ಪ್ರತಿಭಟನೆ ಸುಮ್ಮನಾಗಲಿಲ್ಲ. ಸಮಸ್ಯೆ ಪರಿಹಾರಕ್ಕೆ ಸರಕಾರ ಮುಂದೆ ಬಂದಿದೆ. 2013ರಲ್ಲಿ ಅರ್ಯಲೆಂಡ್‌ನಲ್ಲಿಯೂ ಇಂತಹದೊಂದು ಘಟನೆ ನಡೆದಿತ್ತು. ಅದು ಸಾಮಾಜಿಕಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಇಪ್ಪತ್ತೈದು ವರ್ಷದ ಐರಿಷ್ ವ್ಯಕ್ತಿರಸ್ತೆಯ ಗುಂಡಿಗಿಳಿದು ಸ್ನಾನ ಮಾಡಿದ್ದು ಅಂದು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರವಾಗಿತ್ತು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News