×
Ad

ಎರಡನೆ ಟೆಸ್ಟ್: ಕಿವೀಸ್ ವಿರುದ್ಧ ಭಾರತ ಮೊದಲ ಇನಿಂಗ್ಸ್ ನಲ್ಲಿ 239/7

Update: 2016-09-30 17:33 IST

ಕೋಲ್ಕತಾ, ಸೆ.30: ಇಲ್ಲಿನ ಈಡನ್ ಗಾರ್ಡನ್ಸ್ ನಲ್ಲಿ ಆರಂಭಗೊಂಡ ನ್ಯೂಝಿಲೆಂಡ್ ವಿರುದ್ಧ ಎರಡನೆ ಕ್ರಿಕೆಟ್ ಟೆಸ್ಟ್ ನ  ಮೊದಲ ಇನಿಂಗ್ಸ್ ನಲ್ಲಿ ಭಾರತ 86 ಓವರ್ ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 239 ರನ್ ಗಳಿಸಿದೆ.   

ಮೊದಲ ದಿನವಾದ ಇಂದು ದಿನದಾಟದಂತ್ಯಕ್ಕೆ ವೃದ್ದಿಮಾನ್ ಸಹಾ ಔಟಾಗದೆ 14 ರನ್ ಮತ್ತು ಇನ್ನೂ ಖಾತೆ ತೆರೆಯದ ರವೀಂದ್ರ ಜಡೇಜ ಔಟಾಗದೆ ಕ್ರೀಸ್ ನಲ್ಲಿದ್ದರು.

ಚೇತೇಶ್ವರ ಪೂಜಾರ 87 ರನ್, ಅಜಿಂಕ್ಯ ರಹಾನೆ 77 ರನ್, ರವಿಚಂದ್ರನ್ ಅಶ್ವಿನ್ 26 ರನ್ ಗಳಿಸಿ ಔಟಾಗಿದ್ದಾರೆ. ಶಿಖರ್ ಧವನ್(1), ಮುರಳೀ ವಿಜಯ್(9), ವಿರಾಟ್ ಕೊಹ್ಲಿ(9), ರೋಹಿತ್ ಶರ್ಮ(2) ಬೇಗನೆ ಔಟಾಗಿದ್ದಾರೆ.

ನ್ಯೂಝಿಲೆಂಡ್ ನ ಮ್ಯಾಟ್ ಹೆನ್ರಿ 35ಕ್ಕೆ 3, ಜೀತನ್ ಪಟೇಲ್ 66ಕ್ಕೆ 2, ಟ್ರೆಂಟ್ ಬೌಲ್ಟ್ ಮತ್ತು ವ್ಯಾಗ್ನರ್ ತಲಾ ಒಂದು ವಿಕೆಟ್ ಹಂಚಿಕೊಂಡರು.

ಟಾಸ್ ಜಯಿಸಿದ ಭಾರತ ಬ್ಯಾಟಿಂಗ್ ಆಯ್ದುಕೊಂಡಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News