×
Ad

ಕಾಸರಗೋಡು: ಸರಕಾರಿ ಶಾಲೆಯಿಂದ ಕಳ್ಳತನ

Update: 2016-09-30 18:36 IST

ಕಾಸರಗೋಡು, ಸೆ.30: ಕಾಸರಗೋಡು ನಗರದ ಸರಕಾರಿ ಯು.ಪಿ ಶಾಲೆಗೆ ನುಗ್ಗಿದ ಕಳ್ಳರು ನಗದು ಕಳವು ಮಾಡಿದ ಘಟನೆ ನಡೆದಿದೆ. ಶಾಲಾ ಕಟ್ಟಡದ ಒಂದನೇ ಮಹಡಿಯಲ್ಲಿರುವ ಕಚೇರಿಯ ಬೀಗ ಮುರಿದು ಒಳನುಗ್ಗಿರುವ ಕಳ್ಳರು ಕಪಾಟುಗಳನ್ನು ಮುರಿದಿದ್ದಾರೆ. ಕಡತಗಳನ್ನು ಚೆಲ್ಲಾಪಿಲ್ಲಿಗೊಳಿಸಲಾಗಿದೆ. ಸುಮಾರು 2,400 ರೂ. ಕಳವು ಮಾಡಿದ್ದಾರೆ.

ಗುರುವಾರ ಸಂಜೆ ಅಧ್ಯಾಪಕರು ಕಚೇರಿಗೆ ಬೀಗ ಹಾಕಿ ತೆರಳಿದ್ದರು. ಶುಕ್ರವಾರ ಬೆಳಗ್ಗೆ ಮುಖ್ಯೋಪಾಧ್ಯಾಯಿನಿ ಸರೋಜಿನಿ ಶಾಲೆಗೆ ಆಗಮಿಸಿದಾಗ ಕಳವು ಗೈದ ಬೆಳಕಿಗೆ ಬಂದಿದೆ.

ಕಚೇರಿಯ ಬೀಗ ಮುರಿಯಲು ಕಳ್ಳರು ಬಳಸಿದ ಕತ್ತಿ ಶಾಲೆ ಪರಿಸರದಲ್ಲಿ ಪತ್ತೆಯಾಗಿದೆ. ಕಾಸರಗೋಡು ಪೊಲೀಸರು ಸ್ಥಳಕ್ಕಾಗಮಿಸಿದ್ದು , ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News