×
Ad

ಅ.2ರಂದು ಬೆಳಪು ಸಹಕಾರಿ ಬ್ಯಾಂಕಿನ ಮೂಳೂರು ಶಾಖೆ ಉದ್ಘಾಟನೆ

Update: 2016-09-30 20:18 IST

ಪಡುಬಿದ್ರೆ, ಸೆ.30: ಬೆಳಪು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮೂಳೂರಿನ 5ನೆ ಸಹಕಾರಿ ಬಂಧು ಶಾಖೆಯು ರವಿವಾರ ಬೆಳಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಬ್ಯಾಂಕಿನ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದ್ದಾರೆ.

ಗುರುವಾರ ಕಾಪು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪಣಿಯೂರಿನಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಬೆಳಪು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಸಹಕಾರಿ ಬಂಧು ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಸುಮಾರು 70ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎಂದರು. ನೂತನ ಕಟ್ಟಡದ ಉದ್ಗಾಟನೆಯನ್ನು ಮಾಜಿ ಸಚಿವ ಕಾಪು ಶಾಸಕ ವಿನಯ ಕುಮಾರ್ ಸೊರಕೆ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ದ. ಕ . ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಂ.ಎನ್ ರಾಜೇಂದ್ರ ಕುಮಾರ್ ವಹಿಸಲಿದ್ದಾರೆ.

ಶಾಪಿಂಗ್ ಮಹಲ್‌ನ್ನು ಮಹಾಲಕ್ಷಿ ದೇವಳದ ಅರ್ಚಕ ವೇದ ಮೂರ್ತಿ ರಾಘವೇಂದ್ರ ಉಪಾಧ್ಯಾಯ, ಲಾಕರ್ ವ್ಯವಸ್ಥೆಯನ್ನು ಮೂಳೂರು ಜುಮ್ಮಾಮಸೀದಿಯ ಖತೀಬರಾದ ಅಬ್ದುಲ್ ರೆಹಮಾನ್ ಮದನಿ, ಗಣಕೀರಣವನ್ನು ಮೂಳೂರು ಚರ್ಚನ ಧರ್ಮಗುರು ಜಾನ್ ವೆಸ್ಲಿ ಕುಂದರ್ ಹಾಗೂ ಮಹಾ ಸ್ವಸಹಾಯ ಸಂಘವನ್ನು ಉಡುಪಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಧಾರ್ಮೀಕ ಪರಿಷತ್ ಸದಸ್ಯ ಕೇಂಜ ಶ್ರೀಧರ ತಂತ್ರಿಯವರು ಶುಬಾಶಂಸನೆ ಗೈಯಲಿದ್ದಾರೆ. ಅತಿಥಿಗಳಾಗಿ ಪ್ರವೀಣ್ ನ್‌ಕಾ, ಶ್ರೀಮತಿ ಚಂದ್ರ ಪ್ರತಿಮಾ, ರಾಜೇಶ್ ರಾವ್ ಪಾಂಗಾಳ, ಕುಮಾರಿ ಸೌಮ್ಯ, ಕಾಪು ದಿವಾಕರ ಶೆಟ್ಟಿ, ವೈ ಸುಧೀರ್ ಕುಮಾರ್ ಬಾಗವಹಿಸಲಿದ್ದಾರೆ.

ಪ್ರತಿಕಾ ಗೋಷ್ಠಿಯಲ್ಲಿ ಬ್ಯಾಂಕಿನ ಪ್ರಬಂಧಕ ರತ್ನಕಾರ ಸೋನ್ಸ್, ಶ್ರೀವತ್ಸ ರಾವ್, ನಿರಂಜನ ಶೆಟ್ಟಿ, ಪಾಂಡು ಶೇರಿಗಾರ್, ಆಲಿಯಬ್ಬ ಬ್ಯಾರಿ, ಗೋಪಾಲ್ ಪೂಜಾರಿ, ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News