ಶಿವಪುರ: ಜಲ್ಲಿ ಕ್ರಷರ್ ತೆರವಿಗೆ ತಹಶೀಲ್ದಾರ್‌ಗೆ ಮನವಿ
ಶಿವಪುರ, ಸೆ.30: ಶಿವಪುರ ಗ್ರಾಮದ ಎಳಗೋಳಿ ಪರಿಸರದಲ್ಲಿ ಕಾರ್ಯಾ ಚರಿಸುತ್ತಿರುವ ಜಲ್ಲಿ ಕ್ರಷರ್‌ನಿಂದ ಎಳಗೋಳಿ ಪರಿಸರದ ಜನರಲ್ಲಿ ತೀವ್ರವಾದ ಆರೋಗ್ಯ ಸಮಸ್ಯೆ ಕಾಡುತ್ತಿದ್ದು ಜನಜೀವನಕ್ಕೆ ಸಮಸ್ಯೆಯಾಗುತ್ತಿದೆ. ಅದನ್ನು ಕೂಡಲೇ ತೆರವುಗೊಳಿಸುವಂತೆ ಎಳಗೋಳಿ ಉದಯ ಶೆಟ್ಟಿ ನೇತೃತ್ವದಲ್ಲಿ ಗ್ರಾಮಸ್ಥರು ಕಾರ್ಕಳ ತಹಶೀಲ್ದಾರ್‌ಗೆ ಮನವಿ ಅರ್ಪಿಸಿದ್ದಾರೆ.
ಜಲ್ಲಿ ಕ್ರಷರ್ ಹಾಗೂ ಲಾರಿಗಳ ಓಡಾಟದಿಂದಾಗಿ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕ್ರಷರಿನಲ್ಲಿ ಜಲ್ಲಿ ಪುಡಿ ಮಾಡುವಾಗ ಆಗುವ ಕಂಪನದಿಂದ ಮನೆಗಳು ಬಿರುಕು ಬಿಟ್ಟಿವೆ. ಜಲ್ಲಿ ಕ್ರಷರ್ ಪುಡಿಯು ಕೃಷಿಭೂಮಿಗೆ ಹೋಗಿ ಕೃಷಿ ನಾಶ ಸೇರಿ ನಿತ್ಯವೂ ಹಲವು ಸಮಸ್ಯೆಗಳು ಆಗುತ್ತಿದ್ದು ಕೂಡಲೇ ಕ್ರಷರ್ ಮತ್ತು ಕ್ರಷರ್ ಸಂಬಂಧಿತ ಉದ್ಯಮಗಳನ್ನು ತೆರವುಗೊಳಿಸುವಂತೆ ಉದಯ ಶೆಟ್ಟಿ ನೇತೃತ್ವದಲ್ಲಿ ಶುಕ್ರವಾರ ಕಾರ್ಕಳ ತಹಶೀಲ್ಧಾರ್ ಟಿ.ಜಿ.ಗುರುಪ್ರಾಸದ್‌ಗೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಹಶೀಲ್ಧಾರ್ ಟಿ.ಜೆ.ಗುರುಪ್ರಸಾದ್ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸ್ಥಳೀಯರು, ಅಜೆಕಾರು ಕಂದಾಯ ನಿರೀಕ್ಷಕ ಮಂಜುನಾಥ ನಾಯಕ್ ಸಹಿತ ಕಂದಾಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.