×
Ad

ಹಾಡಲು ಭಾಷೆಗಿಂತ ಸಾಹಿತ್ಯ ಮುಖ್ಯ: ಗಾಯಕ ಕೃಷ್ಣ ಕುಮಾರ್ ಕುನ್ನತ್

Update: 2016-09-30 21:02 IST

ಮಂಗಳೂರು, ಸೆ. 30: ನನಗೆ ಹಾಡನ್ನು ಹಾಡಲು ಭಾಷೆಗಿಂತ ಸಾಹಿತ್ಯ ಮುಖ್ಯ. ಉತ್ತಮ ಸಾಹಿತ್ಯವಿದ್ದರೆ ಹಾಡಲು ಇಚ್ಚಿಸುತ್ತೇನೆ ಎಂದು ಬಾಲಿವುಡ್ ಹಿನ್ನೆಲೆ ಗಾಯಕ ಕೃಷ್ಣ ಕುಮಾರ್ ಕುನ್ನತ್ (ಕೆ.ಕೆ) ಹೇಳಿದರು.

ಅವರು ಪೋರಂ ಫಿಜಾ ಮಾಲ್‌ನಲ್ಲಿ ನಡೆದ ರಾಕ್ಸ್ ಲೈವ್ ವಿದ್ ಕೆಕೆ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ಫೋರಂ ಫಿಜ್ಜಾ ಮಾಲ್ ಕಚೆರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.

ಕಳೆದ ವರ್ಷ 6 ಹಾಡುಗಳನ್ನು ಹಾಡಿದ್ದೇನೆ. ಈ ವರ್ಷ 6ಕ್ಕೂ ಅಧಿಕ ಹಾಡುಗಳನ್ನು ಈಗಾಗಲೇ ಹಾಡಿ ಮುಗಿಸಿದ್ದೇನೆ. ಕನ್ನಡದಲ್ಲೂ ಮೂರು ಹಾಡುಗಳನ್ನು ಹಾಡಿದ್ದೇನೆ. ಮಲಯಾಳಂ, ತೆಲುಗು, ತಮಿಳಿನಲ್ಲೂ ಹಾಡಿದ್ದೇನೆ. ಭಾಷೆಗಿಂತಲೂ ಸಾಹಿತ್ಯದ ಬಗ್ಗೆ ವಿಶೇಷ ಗಮನ ನೀಡುತ್ತೇನೆ. ಒಳ್ಳೆಯ ಸಾಹಿತ್ಯ ಇದ್ದರೆ ಮಾತ್ರ ನಾನು ಹಾಡಲು ಬಯಸುತ್ತೇನೆ. ಹಾಡುಗಳನ್ನು ಹಾಡುವುದಕ್ಕಿಂತಲೂ ಮುಖ್ಯವಾಗಿ ಲೈವ್ ಕಾರ್ಯಕ್ರಮಗಳನ್ನು ನೀಡುವುದರಲ್ಲಿ ನನಗೆ ಹೆಚ್ಚು ಆಸಕ್ತಿ. ದೇಶ ವ್ಯಾಪಿಯಲ್ಲಿ ನಾನು ಲೈವ್ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಾಕಷ್ಟು ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದೇನೆ ಎನ್ನುವುದು ನನಗೆ ಖುಷಿ ಕೊಡುವ ವಿಚಾರ ಎಂದರು.

ಮಂಗಳೂರಿಗೆ ಇದು ನನ್ನ ಮೂರನೆ ಭೇಟಿಯಾಗಿದ್ದು ಇಲ್ಲಿ ನನ್ನ ಹಾಡಿನ ಕಾರ್ಯಕ್ರಮಕ್ಕೆ ಸಾಕಷ್ಟು ಸಂಖ್ಯೆಯ ಯುವಜನತೆ ಬಂದಿದ್ದರು. ಮಂಗಳೂರಿನ ಯುವಜನತೆ ಸಂಗೀತ ಕುರಿತು ವಿಶೇಷ ಆಸಕ್ತಿ ಇರುವವರು ಎಂದರು.

ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಬಾಯಿಜಾನ್ ಸಿನಿಮಾದಲ್ಲಿ ಹಾಡನ್ನು ಸಿಡ್ನಿಯಲ್ಲಿ ಹಾಡಿದ್ದು ವಿಶೇಷ. ಈ ಸಂದರ್ಭದಲ್ಲಿ ನಾನು ಸಿಡ್ನಿಯಲ್ಲುದ್ದದರಿಂದ ಸಾಹಿತ್ಯವನ್ನು ಈಮೇಲ್ ಮೂಲಕ ಪಡೆದುಕೊಂಡು ಅಲ್ಲಿಯ ಸ್ಟುಡಿಯೋದಲ್ಲಿ ಹಾಡಲಾಯಿತು. ಅಲ್ಲಿ ಹಾಡಿದ ತೂಜೋ ಮಿಲಾ ಹಾಡು ಸೂಪರ್ ಹಿಟ್ ಆಗಿದೆ ಎಂದರು.

ಈ ಸಂದರ್ಭದಲ್ಲಿ ಫೋರಂ ಫಿಜಾ ಮಾಲ್‌ನ ಅಸಿಸ್ಟೆಂಟ್ ಸೆಂಟರ್ ಮ್ಯಾನೇಜರ್ ಫಯಾಜ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News