×
Ad

ಬಾಂಗ್ಲಾ ಸೋಲಿಸಿದ ಭಾರತ ಚಾಂಪಿಯನ್

Update: 2016-09-30 22:59 IST

ಹೊಸದಿಲ್ಲಿ, ಸೆ.30: ನಾಲ್ಕನೆ ಆವೃತ್ತಿಯ 18 ವರ್ಷದೊಳಗಿನವರ ಏಷ್ಯಾಕಪ್ ಹಾಕಿ ಟೂರ್ನಮೆಂಟ್‌ನಲ್ಲಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಮಣಿಸಿದ ಭಾರತ ಟ್ರೋಫಿ ಎತ್ತಿ ಹಿಡಿದಿದೆ.

ಇಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಭಾರತದ ಪುರುಷರ ಹಾಕಿ ತಂಡ ಬಾಂಗ್ಲಾದೇಶವನ್ನು 5-4 ಗೋಲುಗಳ ಅಂತರದಿಂದ ಮಣಿಸಿತು. ಅತ್ಯಂತ ಪೈಪೋಟಿಯಿಂದ ಕೂಡಿದ್ದ ಪಂದ್ಯದಲ್ಲಿ ಭಾರತದ ಯುವ ಆಟಗಾರರು ಕೊನೆಯ ತನಕ ಹೋರಾಟವನ್ನು ನೀಡಿ ಪಂದ್ಯವನ್ನು ರೋಚಕವಾಗಿ ಗೆದ್ದುಕೊಂಡರು.

ಈ ಮೂಲಕ ಕಳೆದ ಶನಿವಾರ ನಡೆದ ಟೂರ್ನಿಯ ಆರಂಭಿಕ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧದ ಸೋಲಿಗೆ ಸೇಡು ತೀರಿಸಿಕೊಂಡರು. ಟೂರ್ನಿಯಲ್ಲಿ ಮೊದಲ ಪಂದ್ಯದಲ್ಲಿ ಬಾಂಗ್ಲಾದ ವಿರುದ್ಧ ಭಾರತ 4-5 ಅಂತರದಿಂದ ಸೋತಿತ್ತು.

ಮೊದಲಾರ್ಧದಲ್ಲಿ ಪಂದ್ಯ 1-1 ರಿಂದ ಸಮಬಲದಲ್ಲಿತ್ತು. ಭಾರತ ತಕ್ಷಣವೇ 3-2 ಮುನ್ನಡೆ ಸಾಧಿಸಿತು. ಆದರೆ, 13 ನಿಮಿಷಗಳ ಬಳಿಕ ಬಾಂಗ್ಲಾದೇಶ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿತು. ಕೇವಲ 2 ಸೆಕೆಂಡ್‌ಗಳ ಬಳಿಕ ಭಾರತ ನಾಲ್ಕನೆ ಗೋಲು ಬಾರಿಸಿತು. ಮತ್ತೊಮ್ಮೆ ತಿರುಗೇಟು ನೀಡಿದ ಬಾಂಗ್ಲಾದೇಶ 4-4 ರಿಂದ ಸಮಬಲ ಸಾಧಿಸಿತು. ಪಂದ್ಯ ಕೊನೆಗೊಳ್ಳಲು 20 ಸೆಕೆಂಡ್ ಬಾಕಿ ಇರುವಾಗ ಐದನೆ ಗೋಲು ಬಾರಿಸಿದ ಭಾರತ ಟೂರ್ನಮೆಂಟ್‌ನಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಅಂಡರ್-18 ಏಷ್ಯಾಕಪ್‌ನ್ನು ಗೆದ್ದುಕೊಂಡಿರುವ ಹರೆಂದರ್ ಸಿಂಗ್ ಮಾರ್ಗದರ್ಶನ ಭಾರತದ ಜೂನಿಯರ್ ಹಾಕಿ ತಂಡ ಈ ವರ್ಷದ ಡಿಸೆಂಬರ್‌ನಲ್ಲಿ ನಡೆಯಲಿರುವ ಜೂನಿಯರ್ ವಿಶ್ವಕಪ್‌ಗೆ ಉತ್ತಮ ತಯಾರಿ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News