×
Ad

ಶ್ರೀಕಾಂತ್ ಅಗ್ರ-10ಕ್ಕೆ ಪ್ರವೇಶ

Update: 2016-09-30 23:01 IST

ಹೊಸದಿಲ್ಲಿ, ಸೆ.30: ಜಪಾನ್ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದ ಕೆ.ಶ್ರೀಕಾಂತ್ ಬಿಡಬ್ಲುಎಫ್ ವಿಶ್ವ ರ್ಯಾಂಕಿಂಗ್‌ನಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಅಗ್ರ-10ಕ್ಕೆ ಮರಳಿದ್ದಾರೆ.

ಐದು ಸ್ಥಾನ ಭಡ್ತಿ ಪಡೆದಿರುವ ಶ್ರೀಕಾಂತ್ ವಿಶ್ವದ ನಂ.9ನೆ ಆಟಗಾರನಾಗಿ ಗುರುತಿಸಿಕೊಂಡಿದ್ದಾರೆ.

ಮಹಿಳೆಯರ ಸಿಂಗಲ್ಸ್‌ನಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ.ವಿ.ಸಿಂಧು ಇತ್ತೀಚೆಗೆ ಯಾವುದೇ ಟೂರ್ನಮೆಂಟ್‌ಗಳಲ್ಲಿ ಆಡದೇ ಇದ್ದರೂ ರ್ಯಾಂಕಿಂಗ್‌ನಲ್ಲಿ ಭಡ್ತಿ ಪಡೆದಿದ್ದಾರೆ.

ರಿಯೋ ಗೇಮ್ಸ್‌ನ ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಿ ಚೇತರಿಸಿಕೊಳ್ಳುತ್ತಿರುವ ಮಾಜಿ ನಂ.1 ಆಟಗಾರ್ತಿ ಸೈನಾ ಮೂರು ಸ್ಥಾನ ಮೇಲಕ್ಕೇರಿ 5ನೆ ಸ್ಥಾನ ತಲುಪಿದ್ದಾರೆ.

ರಿಯೋ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತೆ ಸಿಂಧು ಎರಡು ಸ್ಥಾನ ಮೇಲಕ್ಕೇರಿ 8ನೆ ಸ್ಥಾನ ತಲುಪಿದ್ದಾರೆ.

  ಇದೇ ವೇಳೆ, ಅಜಯ್ ಜಯರಾಮ್ ಪುರುಷರ ಸಿಂಗಲ್ಸ್‌ನಲ್ಲಿ 9 ಸ್ಥಾನ ಕೆಳ ಜಾರಿ 27ನೆ ಸ್ಥಾನದಲ್ಲಿದ್ದಾರೆ. ಎಚ್‌ಎಸ್ ಪ್ರಣಯ್ ಹಾಗೂ ಬಿ.ಸಾಯಿ ಪ್ರಣೀತ್ ಕ್ರಮವಾಗಿ 31ನೆ ಹಾಗೂ 35ನೆ ಸ್ಥಾನದಲ್ಲಿದ್ದಾರೆ. ನ್ಯಾಶನಲ್ ಚಾಂಪಿಯನ್ ಸಮೀರ್ ವರ್ಮ ಒಂದು ಸ್ಥಾನ ಭಡ್ತಿ ಪಡೆದು 40ನೆ ಸ್ಥಾನದಲ್ಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News