×
Ad

ಸುಪ್ರೀಂ ಕೋರ್ಟ್‌ನಿಂದ ರದ್ದು

Update: 2016-09-30 23:47 IST

ಹೊಸದಿಲ್ಲಿ, ಸೆ.30: ಆರ್‌ಜೆಡಿ ಸಂಸದ ಮುಹಮ್ಮದ್ ಶಹಾಬುದ್ದೀನ್‌ಗೆ ಪಾಟ್ನಾ ಹೈಕೋರ್ಟ್ ಮಂಜೂರು ಮಾಡಿದ್ದ ಜಾಮೀನನ್ನು ಸುಪ್ರೀಂಕೋರ್ಟ್ ಶುಕ್ರವಾರ ರದ್ದುಗೊಳಿಸಿದೆ.

ನ್ಯಾಯಮೂರ್ತಿಗಳಾದ ಪಿ.ಜಿ. ಘೋಷ್ ಹಾಗೂ ಅಮಿತಾಭ್ ರಾಯ್ ಅವರಿದ್ದ ಪೀಠವೊಂದು, ಶಹಾಬುದ್ದೀನ್‌ಗೆ ಶರಣಾಗುವಂತೆ ಆದೇಶಿಸಿದ್ದು, ಆತನನ್ನು ಕಸ್ಟಡಿಗೆ ಪಡೆದುಕೊಳ್ಳುವಂತೆ ಬಿಹಾರ ಸರಕಾರಕ್ಕೆ ಸೂಚಿಸಿದೆ.
ಹಲವು ಪ್ರಕರಣಗಳಿಗೆ ಸಂಬಂಧಿಸಿ 10 ವರ್ಷಗಳಿಗೂ ಹೆಚ್ಚು ಕಾಲದಿಂದ ಕಾರಾಗೃಹದಲ್ಲಿದ್ದ ಶಹಾಬುದ್ದೀನ್‌ಗೆ ರಾಜೀವ್ ರೋಶನ್ ಎಂಬಾತನ ಹತ್ಯೆ ಪ್ರಕರಣದಲ್ಲಿ ಪಾಟ್ನಾ ಹೈಕೋರ್ಟ್ ಈ ತಿಂಗಳ ಆರಂಭದಲ್ಲಿ ಜಾಮೀನು ಮಂಜೂರು ಮಾಡಿತ್ತು. ರೋಶನ್, ಸಿವಾನ್‌ನಲ್ಲಿ ನಡೆದಿದ್ದ ತನ್ನ ಸೋದರರಿಬ್ಬರ ಹತ್ಯೆಗೆ ಸಾಕ್ಷಿಯಾಗಿದ್ದನು.
ರೋಶನ್ ಹತ್ಯಾ ಪ್ರಕರಣದ ವಿಚಾರಣೆಯನ್ನು ಕಾನೂನಿನನ್ವಯ ತ್ವರಿತವಾಗಿ ಪೂರ್ಣಗೊಳಿಸುವಂತೆಯೂ ಸುಪ್ರೀಂ ಕೋರ್ಟ್ ಬಿಹಾರ ಸರಕಾರ ಹಾಗೂ ಕೆಳ ನ್ಯಾಯಾಲಯಕ್ಕೆ ಆದೇಶ ನೀಡಿದೆ.
ರೋಶನ್‌ನ ಇಬ್ಬರು ಸೋದರರ ಹತ್ಯಾ ಪ್ರಕರಣದಲ್ಲೂ ಶಹಾಬುದ್ದೀನ್‌ಗೆ ಮಂಜೂರಾಗಿರುವ ಜಾಮೀನನ್ನು ರದ್ದುಪಡಿಸುವಂತೆ ಕೋರಿರುವ ಇನ್ನೊಂದು ಅರ್ಜಿಯ ಸಂಬಂಧ ನ್ಯಾಯಾಲಯವು ಬಿಹಾರ ಸರಕಾರ ಹಾಗೂ ಶಹಾಬುದ್ದೀನ್‌ಗೆ ನೋಟಿಸ್‌ಗಳನ್ನು ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News