ಇಂದು ಹಿರಿಯ ನಾಗರಿಕರ ತಪಾಸಣಾ ಕ್ಲಿನಿಕ್ ಉದ್ಘಾಟನೆ
Update: 2016-10-01 00:23 IST
ಉಳ್ಳಾಲ, ಸೆ.30: ದೇರಳಕಟ್ಟೆ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಹಿರಿಯ ನಾಗರಿಕರ ಸಂಪೂರ್ಣ ತಪಾಸಣಾ ಕ್ಲಿನಿಕ್ ಉದ್ಘಾಟನೆ ಮತ್ತು ಹಿರಿಯ ನಾಗರಿಕರ ದಿನಾಚರಣೆಯು ಅ.1ರಂದು ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದೆ.
ಸಮಾಜ ಕಾರ್ಯಶಿಕ್ಷಣ ಹಾಗೂ ಹಿರಿಯ ನಾಗರಿಕರ ಕ್ಷೇಮಾಭಿವೃದ್ಧಿಗಾಗಿ ಶ್ರಮಿಸಿದ ಮಂಗಳೂರಿನ ವಿಶ್ವಾಸ್ ಟ್ರಸ್ಟ್‌ನ ಡಾ.ಒಲಿಂಡಾ ಪಿರೇರಾರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ಹಿರಿಯ ನಾಗರಿಕರ ಆರೋಗ್ಯ ಕಾರ್ಡ್ ಬಿಡುಗಡೆ, ರೋಗಿಗಳ ಸಹಾಯಕರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಅಶಕ್ತ ರೋಗಿಗಳಿಗೆ ಮನೆಯಲ್ಲಿ ಚಿಕಿತ್ಸೆ ವ್ಯವಸ್ಥೆಯ ಉದ್ಘಾಟನೆ ಇದೇ ಸಂದರ್ಭ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.