ಇಂದು ಸಿಎಂಇ-ಲಿಂಫೋಮ ಅಪ್‌ಡೇಟ್
Update: 2016-10-01 00:23 IST
ಮಂಗಳೂರು, ಸೆ.30: ನಗರದ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಪೆಥೋಲಜಿ ಮತ್ತು ಒಂಕಾಲಜಿ ವಿಭಾಗದ ಆಶ್ರಯದಲ್ಲಿ ಲಿಂಫೋಮ ಅಪ್‌ಡೇಟ್‌ನ ಮೇಲೆ ಸಿಎಂಇ ಕಾರ್ಯಕ್ರಮವು ಅ.1ರಂದು ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನ ಸಭಾಭವನ ದಲ್ಲಿ ನಡೆಯಲಿದೆ.
ಬೆಳಗ್ಗೆ 8:30ರಿಂದ ಸಂಜೆ 5ರವರೆಗೆ ನಡೆಯುವ ಕಾರ್ಯಕ್ರಮ ದಲ್ಲಿ ಮುಂಬೈಯ ಟಾಟಾ ಮೆಮೋರಿಯಲ್ ಆಸ್ಪತ್ರೆಯ ಹೆಮ ಟೋಪೆಥೋಲಜಿಯ ಪ್ರೊಫೆಸರ್ ಡಾ.ಸುಮೀತ್ ಗುಜ್ರಾಲ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಫಾ.ಮುಲ್ಲರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆ.ಫಾ.ರಿಚರ್ಡ್ ಕುವೆಲ್ಲೊ ಅಧ್ಯಕ್ಷತೆ ವಹಿಸುವರು ಎಂದು ಪ್ರಕಟನೆ ತಿಳಿಸಿದೆ.