×
Ad

ಬಂಟ್ವಾಳದಲ್ಲಿ ಅತ್ಯಧಿಕ ಅಭಿವೃದ್ಧಿ ಕಾರ್ಯ: ಸಚಿವ ರೈ

Update: 2016-10-01 00:24 IST

ಬಂಟ್ವಾಳ, ಸೆ.30: ಪುರಸಭಾ ವ್ಯಾಪ್ತಿಯ ಪಾಣೆಮಂಗಳೂರು ವಾರ್ಡ್‌ನ ಆಲಡ್ಕ ದಿಂದ ಉಪ್ಪುಗುಡ್ಡೆ ಸಂಪರ್ಕಿಸುವ ಕಾಲು ದಾರಿಗೆ ಸುಮಾರು 3.30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ಮೆಟ್ಟಿಲುಗಳನ್ನು ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶುಕ್ರವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ರಾಜ್ಯದ ಉಳಿದ ಎಲ್ಲ ವಿಧಾನಸಭಾ ಕ್ಷೇತ್ರಗಳಿಗಿಂತ ಅಧಿಕ ಅಭಿವೃದ್ಧಿ ಕಾರ್ಯ ಆಗಿರುವ ಕ್ಷೇತ್ರ ಬಂಟ್ವಾಳ ಎನ್ನುವುದಕ್ಕೆ ಹೆಮ್ಮೆ ಆಗುತ್ತದೆ ಎಂದರು.
ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಜಿಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಸದಸ್ಯ ಸದಾಶಿವ ಬಂಗೇರ, ನಾಮನಿರ್ದೇಶಿತ ಸದಸ್ಯ ಸಿದ್ದೀಕ್, ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮಾಜಿ ಸದಸ್ಯ ರಫೀಕ್, ಟ್ರಿಬ್ಯುನಲ್ ಮಾಜಿ ಸದಸ್ಯ ಅಹ್ಮದ್ ಬಾವ ಯಾಸೀನ್, ಕೆಡಿಪಿ ಸದಸ್ಯ ಉಮೇಶ್ ಬೋಳಂತೂರು, ಸಜಿಪ ಮುನ್ನೂರು ಗ್ರಾಪಂ ಅಧ್ಯಕ್ಷ ಮುಹಮ್ಮದ್ ಶರೀಫ್ ನಂದಾವರ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಕಾರ್ಯದರ್ಶಿ ಇಸ್ಮಾಯೀಲ್ ಪಡ್ಪು, ಗುತ್ತಿಗೆದಾರ ಲತೀಫ್ ದಾಸರಗುಡ್ಡೆ ಉಪಸ್ಥಿತರಿದ್ದರು. ಪುರಸಭಾ ಸದಸ್ಯೆ ಚಂಚಲಾಕ್ಷಿ ಸ್ವಾಗತಿಸಿದರು. ನಿತಿನ್ ಬಂಗ್ಲೆಗುಡ್ಡೆ ವಂದಿಸಿದರು. ಪತ್ರಕರ್ತ ಅಶ್ರಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News