ಅಪಘಾತ ಪ್ರಕರಣ: ಬಸ್ ಚಾಲಕನಿಗೆ 6 ತಿಂಗಳು ಸಜೆ
Update: 2016-10-01 00:25 IST
ಪುತ್ತೂರು, ಸೆ.30: ಕಳೆದ 5 ವರ್ಷಗಳ ಹಿಂದೆ ಶಿರಾಡಿಯಲ್ಲಿ ನಡೆದ ಬಸ್ ಅಪಘಾತವೊಂದರಲ್ಲಿ ಬಸ್‌ನಲ್ಲಿದ್ದ 6 ಮಂದಿ ಪ್ರಯಾಣಿಕರು ಗಾಯಗೊಂಡು, ಓರ್ವ ಬಾಲಕ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಘಟನೆಗೆ ಕಾರಣನಾದ ಬಸ್‌ಚಾಲಕ ರಾಜೇಶ್ ಯಾನೆ ನಾಗರಾಜ್‌ಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ಚಾಲಕನಿಗೆ ಸೆಕ್ಷನ್ 279ರಂತೆ 6 ತಿಂಗಳ ಸಜೆ ಹಾಗೂ 1,000 ರೂ. ದಂಡ, ಸೆಕ್ಷನ್ 337ರಂತೆ 3 ತಿಂಗಳು ಸಜೆ ಹಾಗೂ 500 ರೂ. ದಂಡ, ಸೆಕ್ಷನ್ 338ರಂತೆ 1 ವರ್ಷ ಸಜೆ ಹಾಗೂ 5,000 ರೂ. ದಂಡ ಮತ್ತು ಸೆಕ್ಷನ್ 304ರಂತೆ 1 ವರ್ಷ ಸಜೆ ಹಾಗೂ 5,000 ರೂ. ದಂಡ ವಿಧಿಸಲಾಗಿದೆ.
2011ರ ಡಿ.30ರಂದು ಬೆಂಗಳೂರಿನಿಂದ ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ರಾಷ್ಟ್ರೀಯ ಹೆದ್ದಾರಿ 75ರಲ್ಲಿನ ಶಿರಾಡಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿಉರುಳಿಬಿದ್ದು ಈ ಅಪಘಾತ ಸಂಭವಿಸಿತ್ತು.
ಪ್ರಾಸಿಕ್ಯೂಷನ್ ಪರ ಸಹಾಯಕ ಸರಕಾರಿ ಅಭಿಯೋಜಕ ಪ್ರತಾಪ್ ವಾದಿಸಿದರು.