×
Ad

ಬೈಕ್ ಅಪಘಾತ: ಸವಾರ ಮೃತ್ಯು

Update: 2016-10-01 00:26 IST

ಉಡುಪಿ, ಸೆ.30: ಬೈಕೊಂದು ಸ್ಕಿಡ್ ಆಗಿ ರಸ್ತೆಗೆ ಉರುಳಿದ ಕಾರಣ ತೀವ್ರವಾಗಿ ಗಾಯಗೊಂಡ ಸವಾರ ಮೃತಪಟ್ಟ ಘಟನೆ ಅಂಬಾಗಿಲು ಜಂಕ್ಷನ್ ಎದುರು ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಮೃತ ಬೈಕ್ ಸವಾರರನ್ನು ಹೇರೂರು ಕೊಳಂಬೆಯ ಸುರೇಶ್ ಪೂಜಾರಿ(42) ಎಂದು ಗುರುತಿಸಲಾಗಿದೆ.

ಹೇರೂರು ಕೊಳಂಬೆಯ ನಿವಾಸಿಯಾಗಿದ್ದ ಸುರೇಶ್ ಮೂಲತ: ತೀರ್ಥಹಳ್ಳಿಯವರಾಗಿದ್ದು, ಉಡುಪಿಯ ಹೊಟೇಲೊಂದರಲ್ಲಿ ಕೆಲಸ ಮಾಡುತಿದ್ದರು. ಶುಕ್ರವಾರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಉಡುಪಿಯತ್ತ ಬರುತಿದ್ದಾಗ ಅಂಬಾಗಿಲು ಜಂಕ್ಷನ್ ಬಳಿ ಈ ಘಟನೆ ನಡೆದಿದೆ.

ತಕ್ಷಣವೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಅವರು ಮೃತಪಟ್ಟಿದ್ದರು.ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಉಡುಪಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News