ಕೇರಳದಲ್ಲಿ ಮಳೆಯ ಪ್ರಮಾಣ ಕುಸಿತ
Update: 2016-10-01 09:48 IST
ಕಾಸರಗೋಡು, ಅ.1: ಹದಿನಾಲ್ಕು ವರ್ಷಗಳ ಅವಧಿಯಲ್ಲಿ ಕೇರಳದಲ್ಲಿ ಈ ಬಾರಿ ಮಳೆ ಪ್ರಮಾಣ ಕುಸಿದಿದೆ. ಅಂಕಿ ಅಂಶಗಳ ಪ್ರಕಾರ ಈ ಬಾರಿ ಕೇರಳದಲ್ಲಿ ಶೇ.34ರಷ್ಟು ಮಳೆಯ ಕೊರತೆ ಉಂಟಾಗಿದೆ.
ಕಾಸರಗೋಡು ಜಿಲ್ಲೆಯಲ್ಲಿ ಮಳೆಯ ಪ್ರಮಾಣ 25 ಶೇ. ಇಳಿಕೆಯಾಗಿದೆ. ಅಂಕಿ ಅಂಶಗಳಂತೆ ಸೆ.30ಕ್ಕೆ ಮುಗಿದ ಮುಂಗಾರು ಮಳೆಯ ಅವಧಿಯಲ್ಲಿ 203 ಸೆಂ.ಮೀ ಮಳೆಯ ಬದಲು ರಾಜ್ಯದಲ್ಲಿ ಸುರಿದದ್ದು 135.23 ಸೆಂ.ಮೀ. ಮಾತ್ರ. 2002ರಲ್ಲಿ 129.2 ಶೇಕಡಾ ಮಳೆ ಬಂದಿತ್ತು. ಇದು 40 ವರ್ಷಗಳಲ್ಲಿ ಬಿದ್ದ ಅತೀ ಕಡಿಮೆ ಮಳೆ ಎಂದು ದಾಖಲಾಗಿತ್ತು.
ಒಟ್ಟು ಮಳೆಯ ಶೇ. 7೦ರಷ್ಟು ಜೂನ್ - ಸೆಪ್ಟ೦ಬರ್ ಅವಧಿಯಲ್ಲಿ ಬೀಳಬೇಕಿದೆ. ಮಳೆ ಪ್ರಮಾಣ ಕಡಿಮೆಯಾಗಿರುವುದು ವಿದ್ಯುತ್ ಉತ್ಪಾದನೆಯ ಮೇಲೆ ಪರಿಣಾಮ ಬೀರುವ ಆತಂಕ ಎದುರಾಗಿದೆ.