ಭಾರತೀಯ ಸೇನೆಗೆ ಹೆದರಿ ಕಾಲ್ಕಿತ್ತ ಉಗ್ರರು
Update: 2016-10-01 10:07 IST
ಹೊಸದಿಲ್ಲಿ, ಅ.1: ಭಾರತದ ಸೇನೆ ಮತ್ತೆ ಸೀಮಿತ ದಾಳಿ ನಡೆಸುವ ಸಾಧ್ಯತೆ ಹಿನ್ನೆಲೆಯಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ತರಬೇತಿ ಪಡೆಯುತ್ತಿದ್ದ ಉಗ್ರರು ಹೆದರಿ ಅಲ್ಲಿಂದ ಪರಾರಿಯಾಗಿದ್ದಾರೆ.
ಇಪ್ಪತ್ತನಾಲ್ಕು ಕ್ಯಾಂಪ್‌ಗಳಲ್ಲಿ ಐನೂರಕ್ಕೂ ಅಧಿಕ ಉಗ್ರರು ತರಬೇತಿ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಈಗ ಅವರೆಲ್ಲ ಅಲ್ಲಿಂದ ಪರಾರಿಯಾಗಿದ್ದಾರೆ. ಭಾರತೀಯ ಸೇನೆಯು ಪಾಕ್‌ನ ಸಂಭಾವ್ಯ ದಾಳಿಯನ್ನು ತಪ್ಪಿಸಲು ತಯಾರಾಗಿದೆ. ಭಾರತೀಯ ಸೇನೆ ಗುರುವಾರ ಮುಂಜಾನೆ ಗಡಿ ನಿಯಂತ್ರಣಾ ರೇಖೆ ದಾಟಿ ನಡೆಸಿದ ಕಾರ್ಯಾಚರಣೆಯಲ್ಲಿ ಕೇವಲ 4 ಗಂಟೆಗಳ ಅವಧಿಯಲ್ಲಿ 38 ಉಗ್ರರು ಹಾಗೂ ಅವರ ರಕ್ಷಣೆಗೆ ಬಂದ 6 ಮಂದಿ ಪಾಕಿಸ್ತಾನಿ ಸೈನಿಕರು ಸೇರಿದಂತೆ 44 ಮಂದಿಯನ್ನು ಹೊಡೆದುರುಳಿಸಿದ್ದರು.