×
Ad

ಮಂಗಳೂರು ದಸರಾಗೆ ಚಾಲನೆ

Update: 2016-10-01 13:50 IST

ಮಂಗಳೂರು, ಅ.1: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಇಂದಿನಿಂದ ಆರಂಭಗೊಂಡ ನವರಾತ್ರಿ ಉತ್ಸವ ಕ್ಕೆ ಮಂಗಳೂರು ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಬ್ಬವನ್ನು ಸಂಪ್ರದಾಯ ಪ್ರಕಾರ ಶಿಸ್ತಿನಿಂದ ಆಚರಿಸಬೇಕು ಎಂದು ವಿನಂತಿಸಿದರು. ಮಂಗಳೂರಿನಲ್ಲಿ ನಡೆಯುವ ನವರಾತ್ರಿ ಉತ್ಸವ ಮತ್ತು ದಸರ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಕಾರ್ಯಕ್ರಮ ಗಳ ಆಯೋಜಕರು ಮತ್ತು ಸಾರ್ವಜನಿಕರು ಪೊಲೀಸರೊಂದಿಗೆ ಕೈಜೋಡಿಸಬೇಕು ಎಂದರು.

ಈ ಸಂದರ್ಭದಲ್ಲಿ  ಮಾತನಾಡಿದ ದೇವಸ್ಥಾನದ ವಕ್ತಾರ ಹರಿಕೃಷ್ಣ ಬಂಟ್ವಾಳ, ದೇಶದಲ್ಲಿಯೆ ವಿಶಿಷ್ಟ ವಾಗಿ ಕುದ್ರೋಳಿ ದೇವಸ್ಥಾನದಲ್ಲಿ ನವರಾತ್ರಿ ಮತ್ತು ದಸರ ಆಚರಿಸಲಾಗುತ್ತಿದೆ. ನವರಾತ್ರಿ ಉತ್ಸವ ದಲ್ಲಿ 21 ಲಕ್ಷ ವಿದ್ಯುತ್ ದೀಪಗಳಿಂದ ಅಲಂಕಾರ ಮಾಡಲಾಗಿದ್ದು  ಇದರಲ್ಲಿ 11 ಲಕ್ಷ ಎಲ್ ಇ ಡಿ ಬಲ್ಬ್ ಗಳನ್ನು ಹಾಕಲಾಗಿದೆ ಎಂದರು.

ನವರಾತ್ರಿ ಉತ್ಸವ ಉದ್ಘಾಟನಾ ಸಮಾರಂಭದಲ್ಲಿ ದೇವಸ್ಥಾನದ ಪ್ರಮುಖರಾದ ಎಚ್.ಎಸ್. ಸಾಯಿರಾಂ, ಪದ್ಮರಾಜ್ ಆರ್., ಉರ್ಮಿಳಾ ರಮೇಶ್ ಕುಮಾರ್, ಬಿ.ಕೆ.ತಾರನಾಥ, ರವಿಶಂಕರ್ ಮಿಜಾರ್, ಬಿ.ಜಿ.ಸುವರ್ಣ, ಮಾಲತಿ ಜನಾರ್ದನ ಪೂಜಾರಿ ,‌ಶೇಖರ್ ಪೂಜಾರಿ, ರಾಧಾಕೃಷ್ಣ ಮೊದಲಾದ ವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News