ಮಲಬಾರ್ ಗೋಲ್ಡ್ಸ್- ಡೈಮಂಡ್ಸ್‌ನಿಂದ ನವರಾತ್ರಿಯ ಮೆರುಗು!

Update: 2016-10-01 08:55 GMT

ಮಂಗಳೂರು, ಅ.1: ಸ್ವರ್ಣ ಹಾಗೂ ವಜ್ರಾಭರಣಗಳ ಉದ್ದಿಮೆಯಲ್ಲಿ ಪ್ರಪಂಚದೆಲ್ಲೆಡೆ ಹೆಸರು ಪಡೆದಿರುವ ಮಲಬಾರ್ ಗೋಲ್ಡ್ಸ್ ಮತ್ತು ಡೈಮಂಡ್ಸ್ ಸಂಸ್ಥೆಯು ಗ್ರಾಹಕರಿಗೆ ಚಿನ್ನ ಹಾಗೂ ವಜ್ರಾಭರಣಗಳ ಹೊಸ ಸಂಗ್ರಹಗಳೊಂದಿಗೆ ನವರಾತ್ರಿಯ ಸಂತಸಕ್ಕೆ ಹೊಸ ಮೆರುಗು ನೀಡಲು ಮುಂದಾಗಿದೆ. ನವರಾತ್ರಿ ನಿಮಿತ್ತ, ಮಲಬಾರ್ ಗೋಲ್ಡ್ಸ್ ಮತ್ತು ಡೈಮಂಡ್ಸ್‌ನ ಮಂಗಳೂರಿನ ಫಳ್ನೀರ್‌ನಲ್ಲಿರುವ ಮಳಿಗೆಯಲ್ಲಿಂದು ಚಿನ್ನ ಹಾಗೂ ವಜ್ರದ ಆಭರಣಗಳ ವಿಶೇಷ ಸಂಗ್ರಹದಿಂದ ಕೂಡಿದ ‘ಆರ್ಟಿಸ್ಟ್ರಿ’ (ಕಲಾತ್ಮಕ) ಪ್ರದರ್ಶನಕ್ಕೆ ಚಲನಚಿತ್ರ ನಟಿ ಕನಿಷ್ಕಾ ಕಪೂರ್ ಚಾಲನೆ ನೀಡಿದರು.

ಮಳಿಗೆಯ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಸಂಸ್ಥೆಯ ನಿರ್ದೇಶಕ ಕರುಣಾಕರನ್, ಆಡಳಿತ ನಿರ್ದೇಶಕ ಝುಬೇರ್ ಎಂ.ಪಿ., ಅಸಿಸ್ಟೆಂಟ್ ಸ್ಟೋರ್ ಹೆಡ್ ಶರತ್‌ಚಂದ್ರನ್, ಮಲಬಾರ್ ಡೆವಲಪರ್ ಪ್ರೈವೇಟ್ ಲಿಮಿಟೆಡ್‌ನ ಆಡಳಿತ ನಿರ್ದೇಶಕ ಸಯ್ಯದ್ ಅಲವಿ, ಉಡುಪಿ ಮಳಿಗೆಯ ಮುಖ್ಯಸ್ಥ ಹಫೀಝ್ ರೆಹಮಾನ, ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪ್ರದರ್ಶನದಲ್ಲಿನ ವಿವಿಧ ಕಲಾತ್ಮಕ ಆಭರಣ ಸಂಗ್ರಹಗಳಲ್ಲಿ ಪ್ರಥಮವಾಗಿ ಖರೀದಿ ಮಾಡಿದ ಗ್ರಾಹಕರಿಗೆ ಆಭರಣಗಳನ್ನು ಹಸ್ತಾಂತರಿಸಲಾಯಿತು.

ಪ್ರದರ್ಶನವು ಇಂದಿನಿಂದ ಅಕ್ಟೋಬರ್ 9ರವರೆಗೆ ನಡೆಯಲಿದೆ. ಮಲಬಾರ್ ಗೋಲ್ಡ್ಸ್ ಆ್ಯಂಡ್ ಡೈಮಂಡ್ಸ್‌ನ ವಜ್ರಾಭರಣಗಳ ಸಂಗ್ರಹವಾದ ಮೈನ್‌ನ ಉಪ ಬ್ರಾಂಡ್ ಆದ ‘ಇರಾ’ ಅನ್ ಕಟ್ ವಿನ್ಯಾಸದ ಆಭರಣಗಳ ಜತೆಗೆ, ಭಾರತೀಯ ಸಾಂಪ್ರದಾಯಿಕ ವಿನ್ಯಾಸದ ‘ಡಿವೈನ್’ನ ವಿನೂತನ ಸಂಗ್ರಹಗಳು, ಕಲಾತ್ಮಕ ಕುಸುರಿಯಿಂದ ಕೂಡಿದ ‘ಎಥ್ನಿಕ್’ ಹಾಗೂ ಅಮೂಲ್ಯ ಹರಳುಗಳನ್ನು ಒಳಗೊಂಡ ‘ಪ್ರೆಶಿಯಾ’ ಮತ್ತು ಮಕ್ಕಳಿಗಾಗಿಯೇ ವಿಶೇಷವಾಗಿ ತಯಾರಿಸಲಾದ ‘ಸ್ಟಾರ್‌ಲೆಟ್ ಕಿಡ್ಸ್’ ವಿಭಾಗದ ವಿನೂತನ ಹಾಗೂ ಹೊಸ ಸಂಗ್ರಹಗಳು ಕೂಡಾ ಪ್ರದರ್ಶನದಲ್ಲಿವೆ.

ಪ್ರದರ್ಶನದ ವೇಳೆಯಲ್ಲಿ ಗ್ರಾಹಕರು ವಿಶೇಷ ಕೊಡುಗೆಗಳನ್ನು ಹಾಗೂ ಆಭರಣಗಳನ್ನು ವಿಶೇಷ ದರದಲ್ಲಿ ಖರೀದಿಸಲು ಅವಕಾಶವಿದೆ. ಗ್ರಾಹಕರ ನಂಬಿಕೆಯ ಬ್ರಾಂಡ್ ಆಗಿರುವ ಮಲಬಾರ್ ಗೋಲ್ಡ್ಸ್ ಆ್ಯಂಡ್ ಡೈಮಂಡ್ಸ್ ಗ್ರೂಪ್ ಪ್ರಪಂಚದ 9 ರಾಷ್ಟ್ರಗಳಲ್ಲಿ 156 ಶಾಖೆಗಳೊಂದಿಗೆ ಗ್ರಾಹಕರಿಗೆ ಆಯ್ಕೆಯ, ನವನವೀನ ವಿನ್ಯಾಸದ ಚಿನ್ನ ಹಾಗೂ ವಜ್ರದ ಆಭರಣಗಳನ್ನು ಒದಗಿಸುತ್ತಿದೆ ಎಂದು ಸಂಸ್ಥೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಮನಮೋಹಕ ವಿಶೇಷ ಸಂಗ್ರಹಗಳು

ಮಲಬಾರ್ ಗೋಲ್ಡ್ಸ್ ಆ್ಯಂಡ್ ಡೈಮಂಡ್ಸ್‌ನ ‘ಆರ್ಟಿಸ್ಟ್ರಿ’ ಆಭರಣಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ನಟಿ ಕನಿಷ್ಕಾ ಕಪೂರ್, ‘‘ಸಂಸ್ಥೆಯು ಅಪರೂಪದ ಹಾಗೂ ಮನಮೋಹಕ ಆಭರಣಗಳ ಸಂಗ್ರಹಗಳನ್ನು ಹೊಂದಿದ್ದು, ಪ್ರದರ್ಶನದಲ್ಲಿ ಮತ್ತಷ್ಟು ಕಲಾತ್ಮಕ ಹಾಗೂ ವಿನೂತನ ಶೈಲಿಯ ಆಭರಣಗಳು ಪ್ರದರ್ಶನಗೊಳ್ಳುತ್ತಿವೆೆ’’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News