ಹಕ್ಕಿಗಳು ಪರಸ್ಪರ ಢಿಕ್ಕಿಯಾಗದೆ ಹಾರುವುದು ಹೇಗೆ?
ಸಿಡ್ನಿ,ಅಕ್ಟೋಬರ್ 1: ಸಾವಿರಾರು ಹಕ್ಕಿಗಳು ಒಂದರ ಹಿಂದೆ ಒಂದರಂತೆ ಹಾರುವಾಗ ಅವುಗಳು ಪರಸ್ಪರ ಯಾಕೆ ಢಿಕ್ಕಿಹೊಡೆಯುವುದಿಲ್ಲ? ಪ್ರಕೃತಿಯೇ ಒದಗಿಸಿದ ಈ ಸುರಕ್ಷಾ ಕ್ರಮೀಕರಣ ಹಿಂದೆ ಇರುವ ವೈಜ್ಞಾನಿಕ ತತ್ವವನ್ನು ವಿಜ್ಞಾನಿಗಳ ಗುಂಪು ಸಂಶೋಧನೆ ನಡೆಸುತ್ತಿದೆ. ಆಸ್ಟ್ರೇಲಿಯ ಕ್ವೀನ್ಸ್‌ಲೆಂಡ್ ಯುನಿವರ್ಸಿಟಿಯ ಪ್ರೊಫೆಸರ್ ಮತ್ತು ಭಾರತೀಯನೂ ಆದ ಮಾಡ್ಯಂ ಶ್ರೀನಿವಾಸನ್ ನೇತೃತ್ವದಲ್ಲಿ ಇದಕ್ಕೆ ಸಂಬಂಧಿಸಿದ ಸಂಶೋಧನೆ ನಡೆಯುತ್ತಿದೆ. ಪಕ್ಷಿಗಳು ಆಕಾಶದಲ್ಲಿ ಹಾರುತ್ತಿರುವಾಗ ಪರಸ್ಪರ ಢಿಕ್ಕಿಯಾಗುವುದು ಬಹಳ ವಿರಳವಾಗಿದೆ.
ಎಷ್ಟೇ ಹಕ್ಕಿಗಳ ಸಂಖ್ಯೆ ಹೆಚ್ಚಿದ್ದರು ಅವುಗಳು ಹಾರುವಾಗ ಆಗಲಿ ದಿಕ್ಕು ಬದಲಿಸಿ ಹಾರುವಾಗಲಾಗಲಿ ಪರಸ್ಪರ ಢಿಕ್ಕಿಯಾಗುವುದಿಲ್ಲ. ಅವುಗಳ ಈ ಸಾಮರ್ಥ್ಯದ ಹಿಂದೆ ಇರುವ ತಂತ್ರಜ್ಞಾನವನ್ನು ಅರಿಯುವ ಪರಿಶ್ರಮ ಈ ಸಂಶೋಧನೆಯದ್ದಾಗಿದೆ. ಈ ಹಿಂದೆ ಈ ವಿಷಯದಲ್ಲಿ ಗಂಭೀರವಾದ ಸಂಶೋಧನೆಗಳೂ ನಡೆದಿಲ್ಲ ಎಂದು ಶ್ರೀನಿವಾಸನ್ ಹೇಳುತ್ತಾರೆ. ಹಾರುವ ಎತ್ತರ ಹೆಚ್ಚಿಸುವಾಗ ಮತ್ತು ಗುಂಪಾಗಿ ಹಾರುವಾಗ ಮತ್ತು ಹಠಾತ್ ದಿಕ್ಕನ್ನು ಅವುಗಳು ಬದಲಿಸುವಾಗ ಪರಸ್ಪರ ಢಿಕ್ಕಿಯಾಗದೆ ಅಂತರವನ್ನು ಪಾಲಿಸುವ ಪರಸ್ಪರ ನಿರ್ಧಾರ ಮತ್ತು ಆ ನಿರ್ಧಾರದ ಅಡಿಯಲ್ಲಿ ಅವುಗಳ ನಡುವೆ ಪರಸ್ಪರ ಆಶಯ ವಿನಿಮಯ ಇರುವುದು ಇದರ ರಹಸ್ಯವಾಗಿದೆಂದು ವಿಜ್ಞಾನಿಗಳು ಈ ಬಗ್ಗೆ ಸಂಶೋಧನೆ ನಡೆಸುತ್ತಿದ್ದಾರೆಂದು ಶ್ರೀನಿವಾಸನ್ ಹೇಳಿದ್ದಾರೆ.
ವಿಮಾನಗಳ ಸಂಖ್ಯೆ ಹೆಚ್ಚಳಗೊಂಡು ಆಕಾಶದಲ್ಲಿ ಸಂಚಾರ ಸಾಧ್ಯತೆ ಹೆಚ್ಚಿದರೆ ಮುಂದೆ ಅವುಗಳ ಢಿಕ್ಕಿಯಾಗದಂತೆ ನೋಡಿಕೊಳ್ಳುವ ಪರಿಹಾರೋಪಾಯವಾಗಿ ಈ ಸಂಶೋಧನೆಯ ಫಲಿತಾಂಶ ಒದಗಬಹುದೆಂಬ ಆಶಾವಾದ ವಿಜ್ಞಾನಿಗಳಲ್ಲಿವೆ. ಗುಂಪಾಗಿ ಹಾರುವ ಪ್ರತಿಯೊಂದು ಹಕ್ಕಿಯೂಅದರ ಸ್ಥಾನವನ್ನು ಮತ್ತು ವೇಗವನ್ನು ಅರಿತುಕೊಳ್ಳುವುದು ಹೇಗೆ ಎಂದು ಈ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆಂದು ವರದಿಯಾಗಿದೆ.