×
Ad

ನವರಾತ್ರಿ ಉಪವಾಸ;ಕೇವಲ ಬಿಸಿನೀರು ಮಾತ್ರ ಸೇವಿಸುವ ಪ್ರಧಾನಿ ನರೇಂದ್ರ ಮೋದಿ

Update: 2016-10-01 15:08 IST

ಹೊಸದಿಲ್ಲಿ, ಅ.1: ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ಎಚ್‌ಡಿ ದೇವೇ ಗೌಡ ಕಾವೇರಿ ನೀರು ಹಂಚಿಕೆಯ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ವಿರೋಧಿಸಿ ಉಪವಾಸ ಆರಂಭಿಸಿದ್ದರೆ, ಪ್ರಧಾನಿ ಮೋದಿ ಪ್ರತಿ ವರ್ಷದಂತೆ ಈ ವರ್ಷವೂ ನವರಾತ್ರಿ ಉಪವಾಸ ಆರಂಭಿಸಿದ್ದಾರೆ.
ನವರಾತ್ರಿಯ  9 ದಿನಗಳ ಕಾಲ ಮೋದಿ ಯಾವುದೇ ಆಹಾರ ಸೇವಿಸದೇ ಕೇವಲ ಬಿಸಿನೀರು ಮಾತ್ರ  ಕುಡಿಯುತ್ತಾರೆ. ಈ ವರ್ಷವೂ ಮೋದಿ ಉಪವಾಸವನ್ನು ಶನಿವಾರ ಬೆಳಗ್ಗೆ ಆರಂಭಿಸಿದ್ದಾರೆ.
ನವರಾತ್ರಿಯ ಈ ಸಂದರ್ಭದಲ್ಲಿ ಮೋದಿ ದೇಶದ ಜನತೆಗೆ ಶುಭ ಹಾರೈಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News