×
Ad

ಅತ್ಯಾಚಾರ ಆರೋಪಿಯ ಮರ್ಮಾಂಗ ಕತ್ತರಿಸಿ ಕೊಂದು ಮರಕ್ಕೆ ನೇಣುಹಾಕಿದರು !

Update: 2016-10-01 16:52 IST

ಬಾರಬಂಕಿ,ಅಕ್ಟೋಬರ್ 1: ಬಾರಬಂಕಿ ಕೋಠಿ ಠಾಣಾ ವ್ಯಾಪ್ತಿಯ ಮಂಝೀಯಾವಾ ಗ್ರಾಮದಲ್ಲಿ ಭಯಾನಕ ಕೊಲೆಯೊಂದು ನಡೆದಿದೆ ಎಂದು ವರದಿಯಾಗಿದೆ. ಅತ್ಯಾಚಾರಕ್ಕೊಳಗಾಗಿದ್ದಾಳೆನ್ನಲಾದ ಹುಡುಗಿಯ ಮನೆಯವರು ಅತ್ಯಾಚಾರ ಆರೋಪಿ ಎನ್ನಲಾದ ಮುಖೇಶ್ ರಾವತ್ ಎಂಬಾತನ ಗುಪ್ತಾಂಗ ಕತ್ತರಿಸಿ ಮರವೊಂದಕ್ಕೆ ನೇತು ಹಾಕಿದ ಬೀಭತ್ಸ ಘಟನೆ ಗ್ರಾಮಸ್ಥರನ್ನು ದಂಗುಪಡಿಸಿದೆ. ಮುಖೇಶ್‌ನ ಮನೆಯವರು ಮುಖೇಶ್ ಅತ್ಯಾಚಾರ ಆರೋಪಿ ಎನ್ನುವುದನ್ನು ನಿರಾಕರಿಸಿದ್ದು, ಆತನಿಂದ ಆತ್ಯಾಚಾರಕ್ಕೊಳಗಾಗಿದ್ದಾಳೆನ್ನುವ ಹುಡುಗಿಯೇ ಆತನೊಂದಿಗೆ ಸಂಬಂಧ ಇರಿಸಿಕೊಂಡಿದ್ದಳು ಎಂದು ಆರೋಪಿಸಿದ್ದಾರೆ.

 ಒಂದು ವರ್ಷಗಳಿಂದ ಅವರಿಬ್ಬರ ನಡುವೆ ಸಂಬಂಧವಿತ್ತು, ಈ ನಡುವೆ ಅವಳನ್ನು ಬೇರೆಡೆಗೆ ಕೊಟ್ಟು ಮದುವೆ ಮಾಡಿಸಲಾಗಿತ್ತು. ತಾಯಿ ಮನೆಗೆ ಬಂದಾಗ ಅವಳನ್ನು ಭೇಟಿಯಾಗಲುಮುಖೇಶ್ ಹೋಗಿದ್ದ. ಇವನನ್ನು ಮನೆಯವರು ನೋಡಿದಾಗ ಹುಡುಗಿ ತನ್ನನ್ನುಅತ್ಯಾಚಾರಮಾಡಿದ್ದಾನೆಂದು ಆರೋಪ ಹೊರಿಸಿದ್ದಾಳೆ. ನಂತರ ಅವನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿತ್ತುಎಂದು ಮುಖೇಶ್‌ನ ಮನೆಯವರು ತಿಳಿಸಿದ್ದಾರೆ.

 ಹೀಗಿದ್ದರೂ, ಸೆಪ್ಟಂಬರ್ ಮೂವತ್ತರಂದು ಹುಡುಗಿ ಮನೆಯವರು ಮುಖೇಶನನ್ನು ಹಿಡಿದು ಥಳಿಸಿದ್ದಾರೆ. ಉಗುರು ಕಿತ್ತು ಹಾಕಿದ್ದಾರೆ. ನಂತರ ಮರ್ಮಾಂಗವನ್ನು ಕತ್ತರಿಸಿಕೊಂದಿದ್ದಾರೆ. ಶವವನ್ನು ಮರಕ್ಕೇ ನೇತು ಹಾಕಿದ್ದಾರೆ. ನಂತರ ಹುಡುಗಿಯ ಮನೆಯವರು ತಮ್ಮ ಮನೆಗೆ ಬೀಗ ಹಾಕಿ ಪರಾರಿಯಾಗಿದ್ದಾರೆ. ಪೊಲೀಸರು ಹುಡುಗಿಯ ಮನೆಯವರ ವಿರುದ್ಧ ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News