×
Ad

ಬೆಳ್ತಂಗಡಿ: ದಲಿತ ಯುವತಿಯ ಅತ್ಯಾಚಾರ; ಆರೋಪಿ ಬಂಧನ

Update: 2016-10-01 17:14 IST

ಬೆಳ್ತಂಗಡಿ, ಅ.1: ಬೆಳ್ತಂಗಡಿ ಸಮೀಪದ ದಲಿತ ಯುವತಿಯೋರ್ವಳ ಮೇಲೆ ಯುವಕನೋರ್ವ ಅತ್ಯಾಚಾರವೆಸಗಿ ಗರ್ಭಿಣಿಯಾಗಿಸಿದ ಬಗ್ಗೆ ಯುವತಿ ನೀಡಿರುವ ದೂರಿನಂತೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ.

ಗೇರುಕಟ್ಟೆ ನಿವಾಸಿ ದಿನೇಶ್ ಬಂಗೇರ (23) ಬಂಧಿತ ಆರೋಪಿ.

ಆರು ತಿಂಗಳ ಹಿಂದೆ ಮನೆಯಿಂದ ಪೇಟೆ ಕಡೆ ಹೋಗುತ್ತಿದ್ದ ಯುವತಿಯನ್ನು ನಿರ್ಜನ ಪ್ರದೇಶದಲ್ಲಿ ತಡೆದ ಈತ ಅತ್ಯಾಚಾರ ನಡೆಸಿದ್ದ. ಹೆದರಿಕೆಯಿಂದ ಯುವತಿ ಈ ವಿಚಾರವನ್ನು ಯಾರಿಗೂ ತಿಳಿಸಿರಲಿಲ್ಲ ಎನ್ನಲಾಗಿದೆ. ಇದೀಗ ಯುವತಿ ಗರ್ಭಿಣಿಯಾಗಿದ್ದು, ದೂರು ನೀಡಿದ್ದಳು. ಈ ಹಿನ್ನೆಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. 

ಯುವತಿಯನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News