ಆಪಲ್ ವಿರುದ್ಧ 'ಗ್ರಾಹಕ' ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ
ಪ್ಯಾರಿಸ್, ಅ. 1 : ಇಲ್ಲಿನ ಡಿಜೋನ್ ನಗರದಲ್ಲಿರುವ ಆಪಲ್ ಶೊರೂಮ್ ಒಂದಕ್ಕೆ ನುಗ್ಗಿದ ಫ್ರೆಂಚ್ ಪ್ರಜೆಯೊಬ್ಬ ಹಲವು ಐಫೋನ್ ಗಳನ್ನೂ ಹಾಗು ಒಂದು ಮ್ಯಾಕ್ ಬುಕ್ ಲ್ಯಾಪ್ ಟಾಪ್ ಅನ್ನು ಪುಡಿಗಟ್ಟಿದ ಘಟನೆ ನಡೆದಿದೆ.
ಕಪ್ಪು ಕನ್ನಡಕ ಹಾಕಿಕೊಂಡು ಬೌಲ್ಸ್ ಆಟದಲ್ಲಿ ಬಳಸುವ ಸ್ಟೀಲ್ ಚೆಂಡನ್ನು ಹಿಡಿದುಕೊಂಡು ಬಂದ ಈ ವ್ಯಕ್ತಿ ಶೋರೂಮ್ ನಲ್ಲಿ ಇಟ್ಟಿದ್ದ ಐಫೋನ್ ಗಳನ್ನು ಒಂದೊಂದಾಗಿ ತೆಗೆದು ಅವುಗಳ ಡಿಸ್ಪ್ಲೇ ಗಳ ಮೇಲೆ ಸ್ಟೀಲ್ ಚೆಂಡನ್ನು ಅಪ್ಪಳಿಸಿ ಪುಡಿಗಟ್ಟಿದ್ದಾನೆ. ಅಲ್ಲಿದ್ದ ಒಬ್ಬ ಗ್ರಾಹಕ ಇದನ್ನು ಚಿತ್ರೀಕರಣ ಮಾಡಿದ್ದಾನೆ. ಇದು ಗೊತ್ತಾದ ಕೂಡಲೇ ಆ ವ್ಯಕ್ತಿ " ಆಪಲ್ ಯುರೋಪಿಯನ್ ಗ್ರಾಹಕ ಹಕ್ಕುಗಳನ್ನು ಉಲ್ಲಂಘಿಸಿದೆ. ಅದು ನನಗೆ ಹಣ ಮರುಪಾವತಿ ಮಾಡಲು ನಿರಾಕರಿಸಿದೆ. ನನ್ನ ಹಣ ಹಿಂದುರುಗಿಸಿ ಎಂದು ನಾನು ಕೇಳಿದ್ದಕ್ಕೆ ಆಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಈಗ ಏನಾಗಿದೆ ನೋಡಿ " ಎಂದು ಹೇಳಿದ್ದಾನೆ.
ಆತನನ್ನು ತಡೆದ ಸುರಕ್ಷತಾ ಸಿಬ್ಬಂದಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ.