×
Ad

ಇರೋಂ ಶರ್ಮಿಳಾರಿಂದ ಹೊಸ ರಾಜಕೀಯ ಪಕ್ಷ

Update: 2016-10-02 13:10 IST

ಹೊಸದಿಲ್ಲಿ ಅಕ್ಟೋಬರ್ 2: ಶಾಂತಿ ಮುಖ್ಯ ಅಜೆಂಡಾವಾಗಿಟ್ಟುಕೊಂಡ ರಾಜಕೀಯ ಪಕ್ಷವೊಂದನ್ನು ರೂಫಿಸುವುದಾಗಿ ಇರೋಂಶರ್ಮಿಳಾ ಹೇಳಿದ್ದಾರೆ. ಮುಂದಿನ ವರ್ಷ ನಡೆಯಲಿರುವ ಮಣಿಪುರದ ವಿಧಾನಸಭಾ ಚುನಾವಣೆಯಲ್ಲಿ ಅದು ಸ್ಪರ್ಧಿಸಲಿದೆ. ಇದು ಮಣಿಪುರದ ರಾಜಕೀಯ ಪಕ್ಷವಾದರೂ ದೌರ್ಜನ್ಯಕ್ಕೊಳಗಾದ ಎಲ್ಲ ಜನರಿಗಾಗಿ ತೊಡಗಿಸಿಕೊಳ್ಳಲಿದೆ ಎಂದು ಅವರು ಪೌರ ಹಕ್ಕು ಕಾರ್ಯಕರ್ತರು ಮತ್ತು ಸುದ್ದಿಗಾರರೊಂದಿಗಿನ ಭೇಟಿಯ ವೇಳೆ ತಿಳಿಸಿದ್ದಾರೆ ಎಂದು ವರದಿಯಾಗಿದೆ. ಗಡಿಯಲ್ಲಿ ಸಂಘರ್ಷ ಸ್ಥಿತಿ ಇರುವುದರಿಂದ ಸೈನ್ಯದ ವಿರುದ್ಧ ಮಾತಾಡುವುದನ್ನು ಸ್ವಲ್ಪಕಾಲ ನಿಲ್ಲಿಸಬಾರದೇ ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಶರ್ಮಿಳಾ,"ಯುದ್ಧದ ಕೂಗುಹಾಕುವುದು ನಿಲ್ಲಬೇಕಾಗಿದೆ.

ಅಪ್ಸಪ ಕಾನೂನು ಹಿಂಪಡೆಯಬೇಕು ಎಂಬ ಆಗ್ರಹದಿಂದ ಒಂದಿಷ್ಟು ಹಿಂದೆ ಸರಿಯುವ ಪ್ರಶ್ನೆಯೇಇಲ್ಲ" ಎಂದಿದ್ದಾರೆ. ಯುದ್ಧಾತುರತೆ ಭಾರತಕ್ಕೂ ಪಾಕಿಸ್ತಾನಕ್ಕೂ ಒಳ್ಳೆಯದೇ ಅಲ್ಲ. ಎಲ್ಲರೂ ಗೌರವದಿಂದ, ಜೀವಭಯವಿಲ್ಲದೆ ಬದುಕುವಂತಾಗಬೇಕು. ನಾನು ಪ್ರಧಾನಿಯಾಗಿರುತ್ತಿದ್ದರೆ “ಜನರೇ ಶಾಂತರಾಗಿ” ಎಂದು ಹೇಳುತ್ತಿದ್ದೆ. ಶರ್ಮಿಳಾರನ್ನು ಬೆಂಬಲಿಸಿ ವಿವಿಧ ವಿದ್ಯಾರ್ಥಿ, ಪೌರಹಕ್ಕು ಹಾಗೂ ಮಹಿಳಾ ಒಕ್ಕೂಟಗಳು ರಂಗಪ್ರವೇಶಿಸಿವೆ. ಇವರಜೊತೆಹೋಗಿ ಗಾಂಧಿ ಜಯಂತಿ ದಿನದಂದು ರಾಷ್ಟ್ರಪತಿಯನ್ನು ಭೇಟಿಯಾಗಿ ಸೇನೆಯ ಕಾನೂನು ವಿರುದ್ಧ ಮನವಿ ಸಲ್ಲಿಸುತ್ತೇನೆ ಎಂದು ಶರ್ಮಿಳಾ ಹೇಳಿದ್ದಾರೆಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News