ಮೋದಿಯ ಎದೆಯಳತೆ 56 ರಿಂದ 100 ಇಂಚು ಆಗಿದೆ: ಮಧ್ಯಪ್ರದೇಶ ಮುಖ್ಯಮಂತ್ರಿ
ಭೋಪಾಲ್, ಅ. 2: ಪಾಕ್‌ಅಧೀನ ಕಾಶ್ಮೀರದಲ್ಲಿ ಮಿಂಚಿನಾಕ್ರಮಣ ನಡೆಸುವ ಮೂಲಕ ಪ್ರಧಾನಿನರೇಂದ್ರ ಮೋದಿಯ ಎದೆಯಳತೆ 56 ಇಂಚಿನಿಂದ 100 ಇಂಚಾಗಿ ಪರಿವರ್ತನೆಗೊಂಡಿದೆ ಎಂದು ಮಧ್ಯಪ್ರದೇಶಮುಖ್ಯಮಂತ್ರಿ ಶಿವರಾಜ್‌ಸಿಂಗ್ ಚೌಹಾನ್ ಹೇಳಿದ್ದಾರೆಂದು ವರದಿಯಾಗಿದೆ.
ಭೋಪಾಲ್‌ನಲ್ಲಿ ಸಣ್ಣ, ಮಧ್ಯಂತರ ಕೈಗಾರಿಕಾ ವಲಯದಲ್ಲಿ ನಡೆದ ಸಮ್ಮೇಳನವೊಂದನ್ನು ಉದ್ಘಾಟಿಸಿ ಮಾತಾಡುತ್ತಾ ಅವರು ಮೋದಿಯನ್ನು ಹೊಗಳಿ ಆಕಾಶಕ್ಕೇರಿಸಿದ್ದಾರೆ.
ಮೋದಿಯ ಬಲಿಷ್ಠ ನಾಯಕತ್ವದಲ್ಲಿ ದೇಶದಲ್ಲಿ ಬೃಹತ್ ಅಭಿವೃದ್ಧಿ ಚಟುವಟಿಕೆಗಳು ನಡೆಯುತ್ತಿವೆ. ಭಾರತದ ಸೇನೆಗೆ ಕೃತಜ್ಞತೆಗಳು. ಜೊತೆಗೆ ಮೋದಿಯನ್ನು ಅಭಿನಂದಿಸುತ್ತೇನೆ. ಪಾಕ್ ವಿರುದ್ಧ ಸೈನಿಕ ಕ್ರಮದ ಮೂಲಕ ಮೋದಿಯ ಎದೆಯಳತೆ ಹೆಚ್ಚಳವಾಗಿದೆ ಎಂದು ಅವರು ಹೆಮ್ಮೆ ಪಟ್ಟಿದ್ದಾರೆ.
ನಮ್ಮಬೆಳವಣಿಗೆ ದರ ಚೀನಕ್ಕಿಂತ ಉನ್ನತವಾಗಿದೆ. ಬಹುಬೇಗನೆ ಭಾರತ ಬಲಿಷ್ಠರಾಷ್ಟ್ರವಾಗಲಿದೆ.
ಭಾರತದಲ್ಲಿ ಈಗ ಅಭಿವೃದ್ಧಿ ತ್ವರಿತಗೊಳ್ಳುತ್ತಿದೆ. ಭಾರತದ ಬೆಳವಣಿಗೆಯಲ್ಲಿ ಮಧ್ಯಪ್ರದೇಶ ಶ್ರೇಷ್ಠ ಬೆಂಬಲವನ್ನು ನೀಡುತ್ತಿದೆ ಎಂದು ಚೌಹಾನ್ ಹೇಳಿದ್ದಾರೆ. ಕೃಷಿಕ್ಷೇತ್ರದಲ್ಲಿ ಮಧ್ಯಪ್ರದೇಶ ಬೆಳವಣಿಗೆಯಂತೂ ಜಗತ್ತಿನಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಅವರು ಅಭಿಪ್ರಾಯಿಸಿದ್ದಾರೆಂದು ವರದಿ ತಿಳಿಸಿದೆ.