×
Ad

ಪಾಕಿಸ್ತಾನ ಸರ್ಜರಿಯಾಗಿ ಕೋಮದಲ್ಲಿರುವ ರೋಗಿ: ಮನೋಹರ್ ಪಾರಿಕ್ಕರ್

Update: 2016-10-02 16:26 IST

ಡೆಹ್ರಾಡೂನ್, ಅಕ್ಟೋಬರ್ 2: ಸರ್ಜರಿಯಾದ ಮೇಲೆ ಪ್ರಜ್ಞೆ ಬರದ ರೋಗಿಯ ಅವಸ್ಥೆಪಾಕಿಸ್ತಾನದ್ದಾಗಿದೆ ಎಂದು ರಕ್ಷಣಾ ಸಚಿವ ಮನೋಹರ್ ಪಾರಿಕ್ಕರ್ ಹೇಳಿದ್ದಾರೆಂದುವರದಿಯಾಗಿದೆ. ಪಾಕ್ ಅಧೀನ ಕಾಶ್ಮೀರದಲ್ಲಿ ಭಾರತ ನಡೆಸಿದ ಮಿಂಚಿನ ದಾಳಿಯ ಕುರಿತು ಅವರು ಈ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ.

 ಶಸ್ತ್ರಕ್ರಿಯೆ ಆಗಿ ಪ್ರಜ್ಞೆ ಬರದ ರೋಗಿಯ ಅವಸ್ಥೆ ಈಗ ಪಾಕಿಸ್ತಾನದ್ದಾಗಿದೆ. ಸರಿಯಾಗಿ ಪ್ರಜ್ಞೆ ಬರದ್ದರಿಂದ ಶಸ್ತ್ರಕ್ರಿಯೆ ಮಾಡಲಾಗಿದೆಯೇ ಎಂಬುದು ಕೂಡಾ ರೋಗಿಗೆ ಗೊತ್ತಾಗುವುದಿಲ್ಲ. ಸರ್ಜಿಕಲ್ ಸ್ಟ್ರೈಕ್(ಮಿಂಚಿನದಾಳಿ) ನಡೆದು ಎರಡು ದಿವಸ ಕಳೆದ ಬಳಿಕವೂ ಏನು ನಡೆದಿದೆ ಎಂದು ಪಾಕಿಸ್ತಾನಕ್ಕೆ ಅರ್ಥವಾಗಿಲ್ಲ ಎಂದು ಪಾರಿಕ್ಕರ್ ವ್ಯಂಗವಾಡಿದ್ದಾರೆ.

ಭಾರತ ಶಾಂತಿಯನ್ನು ಬಯಸುತ್ತದೆ. ಪ್ರಚೋದನೆಯಿಲ್ಲದ ಆಕ್ರಮಣದಲ್ಲಿ ನಮಗೆ ವಿಶ್ವಾಸವಿಲ್ಲ. ಹೇಗೆ ಪ್ರತೀಕಾರಗೈಯ್ಯಬೇಕು ಎಂದು ಭಾರತದ ಸೇನೆಗೆ ಗೊತ್ತಿದೆ ಎಂಬುದನ್ನು ಪಾಕಿಸ್ತಾನಕ್ಕೆ ಗೊತ್ತುಪಡಿಸಲಿಕ್ಕಾಗಿ ಕೂಡಾ ಮಿಂಚಿನ ದಾಳಿಯನ್ನು ನಡೆಸಲಾಗಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.

ಭಾರತ ಸೇನೆಯನ್ನು ಹನುಮಂತನಿಗೆ ಹೋಲಿಸಿದ ಪಾರಿಕ್ಕರ್ ಮಿಂಚಿನ ದಾಳಿಯ ಬಳಿಕ ಸೈನ್ಯ ತನ್ನ ಶಕ್ತಿಯನ್ನು ಸರಿಯಾಗಿ ಅರ್ಥಮಾಡಿಕೊಂಡಿದೆ ಎಂದು ಅವರು ಹೇಳಿದ್ದಾರೆ. ಹನುಮಂತನಿಗೆ ಶಕ್ತಿಯಿರುವುದನ್ನು ತಿಳಿಸಿಕೊಟ್ಟ ಜಾಂಬವಂತನ ಕತೆಯನ್ನು ಪಾರಿಕ್ಕರ್ ನೆನಪಿಸಿದ್ದಾರೆ.

ನಮ್ಮ ಸೈನ್ಯಕ್ಕೆ ಏನೆಲ್ಲ ಸಾಧ್ಯವಿದೆ ಎಂದು ಅರ್ಥಮಾಡಿಕೊಡಲುಕೂಡಾಈ ಮಿಂಚಿನ ದಾಳಿಯಿಂದ ಸಾಧ್ಯವಾಗಿದೆ. ಪಾಕಿಸ್ತಾನ ಗಾಬರಿಗೊಂಡು ನಿಂತಿದೆ. ಹೇಗೆ ಪ್ರತಿಕ್ರಿಯಿಸಬೇಕೆಂದು ಅವರಿಗೆ ಇನ್ನೂ ಅರ್ಥವಾಗಿಲ್ಲ ಎಂದು ಪಾರಿಕ್ಕರ್ ತಿಳಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News