ಸಲ್ಮಾನ್ ಪರ ನಿಂತ ಯೋಗಿ ಆದಿತ್ಯಾನಂದ
Update: 2016-10-02 17:10 IST
ನವದೆಹಲಿ, ಅ.2: ಇತ್ತೀಚೆಗೆ ಹೇಳಿಕೆ ನೀಡಿದ್ದ ಬಾಲಿವುಡ್ ನಟ ಸಲ್ಮಾನ್ ಖಾನ್, ಭಾರತದಲ್ಲಿಯ ಪಾಕಿಸ್ತಾನದ ಕಲಾವಿದರ ಪರವಾಗಿ ತಮ್ಮ ಬೆಂಬಲವನ್ನು ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿಯ ಯೋಗಿ ಆದಿತ್ಯಾನಂದ, ನಮ್ಮ ಯುದ್ಧವೇನಿದ್ದರೂ ಭಯೋತ್ಪಾದನೆಯ ವಿರುದ್ಧವೇ ಹೊರತು, ಯಾವುದೇ ಒಂದು ನಿಖರ ಕಲೆಯ ವಿರುದ್ಧವಲ್ಲ ಎಂದು ಹೇಳಿದ್ದಾರೆ.
ಪಾಕಿಸ್ತಾನಿ ಕಲಾವಿದರ ಪರವಾಗಿ ಹೇಳಿಕೆ ನೀಡುವುದನ್ನು ಮುಂದುವರಿಸಿದ್ದಲ್ಲಿ ಅವರ ಸಿನೆಮಾಗಳನ್ನು ಬ್ಯಾನ್ ಮಾಡಲಾಗುವುದು ಎಂದು ಎಮ್ಮೆನ್ನೆಸ್ ಮುಖ್ಯಸ್ಥ ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದರು.
ಈ ಮಧ್ಯೆ ಸಲ್ಮಾನ್ ಖಾನ್ ನೀಡಿರುವ ಹೇಳಿಕೆಯಿಂದ ಅವರು ಪಾಠ ಕಲಿಯಬೇಕಾಗಿದೆ. ಒಂದು ವೇಳೆ ಪಾಕಿಸ್ತಾನದ ಪರ ನಿಲುವು ತಾಳಿದ್ದಲ್ಲಿ ಅವರು ಅಲ್ಲಿಯೇ ಹೋಗಿ ನೆಲೆಸಬಹುದು ಎಂದು ಶಿವಸೇನಾ ಮುಖಂಡೆ ಮನೀಶಾ ಕಾಯನಡೆ ಹೇಳಿಕೆ ನೀಡಿದ್ದಾರೆ.