ಉಡುಪಿ ಸಿಟಿಬಸ್‌ಗಳಿಂದ ಹೊಸ ಪಾಸ್ ವ್ಯವಸ್ಥೆ
ಉಡುಪಿ, ಅ.2: ಉಡುಪಿ ಸಿಟಿ ಬಸ್‌ಗಳಲ್ಲಿ ಆರ್‌ಎಫ್‌ಐಡಿ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪಾಸ್‌ಗಳನ್ನು ಮತ್ತು ನಿತ್ಯ ಪ್ರಯಾಣಿಕರಿಗೆ ರಿಯಾಯಿತಿ ದರದಲ್ಲಿ ಕೂಪನ್‌ಗಳನ್ನು ನೀಡಲಾಗುವುದು ಎಂದು ಉಡುಪಿ ಸಿಟ್ ಬಸ್ ಮಾಲಕರ ಸಂಘದ ಅಧ್ಯಕ್ಷ ಸುರೇಶ್ ನಾಯಕ್ ಕುಯಿಲಾಡಿ ತಿಳಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.20ರಿಂದ ಈ ನೂತನ ವ್ಯವಸ್ಥೆ ಜಾರಿಗೆ ಬರುತ್ತಿದ್ದು, ಅ.10ರಿಂದ ಸಂಘದ ಎಲ್ಲ ಕಚೇರಿ ಗಳಲ್ಲಿ ಅರ್ಜಿಗಳನ್ನು ವಿತರಿಸಲಾಗುವುದು. 1ನೆ ತರಗತಿಯಿಂದ 7ನೆ ತರಗತಿ ವರೆಗಿನ ವಿದ್ಯಾರ್ಥಿಗಳಿಗೆ ವಾರ್ಷಿಕ ದರ 125ರೂ., 7-10ನೆ ತರಗತಿ ವಿದ್ಯಾರ್ಥಿಗಳಿಗೆ 725ರೂ., ಪಿಯುಸಿ, ಪದವಿ, ಡಿಪ್ಲೋಮಾ ವಿದ್ಯಾರ್ಥಿ ಗಳಿಗೆ 1300ರೂ., ಇಂಜಿನಿಯರ್, ಎಂಬಿಬಿಎಸ್, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ವಾರ್ಷಿಕ ದರ 1550ರೂ. ನಿಗದಿಪಡಿಸಲಾಗಿದೆ ಎಂದರು.
ನರ್ಮ್ ಬಸ್‌ಗೆ ವಿರೋಧವಿಲ್ಲ
ಕೆಎಸ್‌ಆರ್‌ಟಿಸಿ ನರ್ಮ್ ಬಸ್‌ಗೆ ನಮ್ಮ ಯಾವುದೇ ವಿರೋಧವಿಲ್ಲ. ಆದರೆ ಅವರು ಸರಿಯಾದ ಮಾರ್ಗದಲ್ಲಿ ಸರಿ ಯಾದ ಸಮಯಕ್ಕೆ ಬಸ್ಸನ್ನು ಓಡಿಸಲಿ. ಅಲ್ಲದೆ ಬಸ್ ಇಲ್ಲದ ಕಡೆ ಬಸ್ ಸಂಚಾರ ಆರಂಭಿಸಿದರೆ ಜನರಿಗೂ ಒಳ್ಳೆಯದು, ಸಂಸ್ಥೆಗೂ ಲಾಭ ಎಂದು ಸುರೇಶ್ ನಾಯಕ್ ಹೇಳಿದರು.
ಸಮಯ ಮತ್ತು ಮಾರ್ಗವನ್ನು ಅನುರಿಸದೆ ಕಾನೂನು ಉಲ್ಲಂಘಿಸುತ್ತಿರುವ ನರ್ಮ್ ಬಸ್‌ಗಳ ವಿರುದ್ಧ ಈಗಾಗಲೇ ಜಿಲ್ಲಾಧಿಕಾರಿ ಮತ್ತು ಆರ್‌ಟಿಓಗೆ ದೂರು ನೀಡಲಾಗಿದೆ. ಮಣಿಪಾಲ- ಉಡುಪಿಗೆ ಸಿಟಿ ಬಸ್ ಗಳು ದಿನಕ್ಕೆ 700 ಟ್ರಿಪ್ ಮಾಡುತ್ತದೆ. ಅದರ ಮಧ್ಯೆ ಈ ಬಸ್‌ಗಳು ಬಂದರೆ ಅವರಿಗೆ ಯಾವುದೇ ಲಾಭ ಆಗಲ್ಲ. ಅದು ಬಿಟ್ಟು ಕೆಲವು ರಿಂಗ್‌ರೋಡ್ ಗಳಲ್ಲಿ ಯಾವುದೇ ಬಸ್ ಸಂಚಾರ ಇಲ್ಲ. ಅಂತಹ ಕಡೆ ನರ್ಮ್ ಬಸ್‌ಗಳನ್ನು ಓಡಿಸಲಿ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಕೃಷ್ಣ ಅಂಚನ್, ಪ್ರಧಾನ ಕಾರ್ಯದರ್ಶಿ ವಾದಿರಾಜ ಸುವರ್ಣ, ಮಾಜಿ ಅಧ್ಯಕ್ಷ ಸುಧಾಕರ ಕಲ್ಮಾಡಿ, ಕಾರ್ಯದರ್ಶಿ ಸಂದೀಪ್, ನಾಗರಾಜ್ ಉಪಸ್ಥಿತರಿದ್ದರು.