ಉಪ್ಪಿನಂಗಡಿ: ಎಸ್ಕೆಎಸ್ಸೆಸ್ಸೆಫ್ ನ ರಿಲೀಫ್ ಸೆಂಟರ್ ಉದ್ಘಾಟನೆ

Update: 2016-10-03 07:37 GMT

ಉಪ್ಪಿನಂಗಡಿ, ಅ.3:  ಎಸ್ಕೆಎಸ್ಸೆಸ್ಸೆಫ್  ತನ್ನ ವಿಕಾಯ ಕಾರ್ಯಕರ್ತರ ಮೂಲಕ ಸಮಾಜ ಸೇವೆಯ ಜೊತೆಗೆ ಅಸಹಾಯಕರ ಮತ್ತು ದುರ್ಬಲರ ಆರೋಗ್ಯ ಸಂಬಂಧಿತ ಸೇವೆಗೆ ಪಣ ತೊಟ್ಟಿದೆ. ಇದರ ಉದ್ದೇಶದೊಂದಿಗೆ ಜಿಲ್ಲಾದ್ಯಂತ ಸಹಕಾರಿ ರಿಲೀಫ್ ಸೆಂಟರ್ ಅಡಿಯಲ್ಲಿ ಕಾರ್ಯಪ್ರವತ್ತವಾಗಲಿದೆ ಎಂದು ಎಸ್ಕೆಎಸ್ಸೆಸ್ಸೆಫ್ ರಾಜ್ಯ ಘಟಕದ ಅಧ್ಯಕ್ಷ ಅನೀಶ್ ಕೌಶರಿ ಹೇಳಿದರು.
 ಗಾಂಧಿ ಜಯಂತಿ ಅಂಗವಾಗಿ ರವಿವಾರ ಉಪ್ಪಿನಂಗಡಿ ಎಸ್ಕೆಎಸ್ಸೆಸ್ಸೆಫ್ ವಲಯ ಸಮಿತಿಯ ಆಶ್ರಯದಲ್ಲಿ ಚೆರುಶ್ಶೇರಿ ಝೈನುದ್ದೀನ್ ಮುಸ್ಲಿಯಾರ್ ಸ್ಮರಣಾರ್ಥ ಸಹಕಾರಿ ರಿಲೀಫ್ ಸೆಂಟರ್ ಉದ್ಘಾಟನೆ ಮತ್ತು ವಿಕಾಯ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾ ಕೆಂಪಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
 
 ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸೈಯದ್ ಜುನೈದ್ ಜಿಫ್ರಿ ತಂಳ್ ಸಹಕಾರಿ ರಿಲ್ೀ ಸೆಂಟರ್ ಕಚೇರಿ ಉದ್ಘಾಟಿಸಿದರು.

ಗಂಡಿಬಾಗಿಲು ಮಸೀದಿ ಖತೀಬ್ ಸೈಯದ್ ಅನಸ್ ತಂಳ್ ದುಆ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ಜಿಲ್ಲಾ ಘಟಕದ ಅಧ್ಯಕ್ಷ ಇಸಾಕ್ ಫೈಝಿ, ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಝಲ್ ರಹ್ಮಾನ್, ಉಪ್ಪಿನಂಗಡಿ ಇಂಡಿಯನ್ ಸ್ಕೂಲ್ ಪ್ರಾಚಾರ್ಯ ವಿನ್ಸೆಂಟ್ ಮೆನೇಜಸ್, ಕ್ಯೂರ್ ಇಟ್ ಕ್ಲಿನಿಕ್‌ನ ಡಾ.ಜೋಯ್, ಕೆಪಿಸಿಸಿ ಕಾರ್ಮಿಕ ವಿಭಾಗದ ನಝೀರ್ ಮಠ, ಎಸ್ಕೆಎಸ್ಸೆಸ್ಸೆಫ್ ಕಡಬ ವಲಯದ ಅಧ್ಯಕ್ಷ ಅಶ್ರ್ ಶೇಡಿಗುಂಡಿ ಸಂದರ್ಭೋಚಿತವಾಗಿ ಮಾತನಾಡಿದರು.

ಜಿಪಂ ಸ್ಥಾಯಿ ಸಮಿತಿಯ ಸದಸ್ಯ ಕೆ.ಕೆ.ಶಾಹುಲ್ ಹಮೀದ್, ಉದ್ಯಮಿ ಯು. ರಾಮ, ಉಪ್ಪಿನಂಗಡಿ ಜಂ-ಇಯ್ಯತ್ತುಲ್ ಮುಅಲ್ಲಿಮೀನ್ ಅಧ್ಯಕ್ಷ ಇಬ್ರಾಹೀಂ ಬಾಖವಿ, ಆದಂಕುಂಞಿ ದಾರಿಮಿ, ಉಪ್ಪಿನಂಗಡಿ ಮದ್ರಸ ಮೆನೇಜ್‌ಮೆಂಟ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ ಕೊಳ್ಳೇಜಾಲ್, ಉಪ್ಪಿನಂಗಡಿ ಕೇಂದ್ರ ಜುಮಾ ಮಸೀದಿಯ ಕಾರ್ಯದರ್ಶಿ ಯು. ಅಬ್ದುಲ್ ಶುಕೂರ್ ಶುಕ್ರಿಯಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಪತ್ಭಾಂದವರಿಗೆ ಸನ್ಮಾನ: ಸಮಾರಂಭದಲ್ಲಿ ಅಪಘಾತ ಸಂದರ್ಭದಲ್ಲಿ ತ್ವರಿತ ಸೇವೆ ನೀಡುವ ಉಪ್ಪಿನಂಗಡಿ ಆ್ಯಂಬುಲೆನ್ಸ್ ಚಾಲಕ ಮುಹಮ್ಮದ್, ಅಪಘಾತದ ವೇಳೆ ಅಪದ್ಭಾಂದರಾಗಿ ಬಂದು ಉಪಚರಿಸುವ ಪುತ್ತಾಕ, ನದಿ ನೀರಿಗೆ ಬಿದ್ದವರನ್ನು ಪ್ರಾಣ ರಕ್ಷಿಸುವ ಈಜುಗಾರ ಮುಹಮ್ಮದ್ ನೆಕ್ಕಿಲಾಡಿಯವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಎಸ್ಕೆಎಸ್ಸೆಸ್ಸೆಫ್ ಉಪ್ಪಿನಂಗಡಿ ಘಟಕದ ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಕೌಸರಿ ಸ್ವಾಗತಿಸಿದರು. ಅಧ್ಯಕ್ಷ ಅಶ್ರ್ ಕೊಳ್ಳೇಜಾಲ್ ವಂದಿಸಿದರು. ಸಾದಿಕ್ ಕೋಲ್ಪೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News