'ಆಸ್ಪತ್ರೆ ಬೆಡ್ ನಲ್ಲಿ ಜಯಲಲಿತಾ' ಚಿತ್ರದ ಹಿಂದಿನ ವಾಸ್ತವ

Update: 2016-10-03 17:20 GMT

ಚೆನ್ನೈ, ಅ. ೩ : ತಮಿಳುನಾಡು ಮುಖ್ಯಮಂತ್ರಿ 'ಜಯಲಲಿತಾ'  ಅವರು ಆಸ್ಪತ್ರೆಯ ತೀವ್ರ ನಿಗಾ ವಿಭಾಗದಲ್ಲಿ ಆಮ್ಲಜನಕದ ಮಾಸ್ಕ್ ಧರಿಸಿ ಮಲಗಿರುವ ಚಿತ್ರ ಇತ್ತೀಚಿಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಆದರೆ ಈ ಚಿತ್ರ ಸಂಪೂರ್ಣ ಸುಳ್ಳು ಎಂದು ಈಗ ಸಾಬೀತಾಗಿದೆ. 

ಈ ಬಗ್ಗೆ ವರದಿ ಮಾಡಿರುವ 'ದಿ ನ್ಯೂಸ್ ಮಿನಿಟ್' ಇದು ಪೆರುವಿನ ರೋಚ್ ಸ್ಟರ್ ಇನ್ಸ್ಟಿ ಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಆಗಸ್ಟ್ 2009ರಲ್ಲಿ ತೆಗೆದ ಚಿತ್ರ ಎಂದು ಹೇಳಿದೆ. ವಿವಿಯ ವೆಬ್ ಸೈಟ್ ಕೂಡ ಇದನ್ನು ಖಚಿತಪಡಿಸಿದೆ. 


 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News