ಪುತ್ರಿಯ ಇಂಟರ್‌ನೆಟ್ ಚಟ: ಜೀವಕಳಕೊಂಡ ತಾಯಿ !

Update: 2016-10-04 06:30 GMT

ಚೀನ, ಅಕ್ಟೋಬರ್ 4: ಚೀನದಲ್ಲಿ ಪುತ್ರಿಯ ಇಂಟರ್‌ನೆಟ್ ಚಟ ಬಿಡಿಸಲು ಹೋದ ತಾಯಿಯೊಬ್ಬರು ಜೀವಕಳಕೊಂಡ ದಾರುಣಘಟನೆ ನಡೆದಿದೆ ಎಂದು ವರದಿಯಾಗಿದೆ. ತಾಯಿಯ ಹತ್ಯೆಯಾಗಿದ್ದು, ಈ ಹತ್ಯೆಯನ್ನು ಪುತ್ರಿಯೇಮಾಡಿದ್ದಾಳೆಂದು ಚೀನದ ಮಾಧ್ಯಮಗಳು ವರದಿ ಮಾಡಿವೆ.

 ಚೀನದ ಹಿಲಾಗಝಿಯಾಂಗ್‌ನಲ್ಲಿ ಓರ್ವ ಹದಿನಾರು ವರ್ಷದ ಬಾಲಕಿಯನ್ನು ಇಂಟರ್‌ನೆಟ್ ಚಟ ಬಿಡಿಸಲು ಬೂಟ್‌ಕೆಂಪ್‌ಗೆ ಕಳುಹಿಸಲಾಗಿತ್ತು. ಬೂಟ್ ಕೆಂಪ್ ಎಂದರೆ ಇಂಟರ್ ನೆಟ್ ಚಟ ಬಿಡಿಸುವ ಕೇಂದ್ರವಾಗಿದೆ. ಬೂಟ್ ಕೆಂಪ್ ನಿಂದ ಬಂದ ಬಾಲಕಿ ಚೆಂಗ್ ಝಿರಾನ್ ತನ್ನಕುಟುಂಬದ ವಿರುದ್ಧ ಪ್ರತೀಕಾರದ ದಾಹದಿಂದ ಕುದಿಯುತ್ತಿದ್ದಳು. ನಾಲ್ಕು ತಿಂಗಳು ಅಲ್ಲಿದ್ದು ಬಂದ ಆಕೆ ಹಣಕ್ಕಾಗಿ ತನ್ನ ತಾಯಿಯನ್ನುಮನೆಯಲ್ಲಿ ಕಟ್ಟಿಹಾಕಿದ್ದಾಳೆ. ನಂತರ ಆಂಟಿಯಿಂದ ಹಣ ಕೇಳಿದ್ದಾಳೆ. ಆಂಟಿಯಿಂದ ಹಣವನ್ನು ಪಡೆದು ಮನೆಗೆ ಬಂದ ಆಕೆ ತಾಯಿಯ ಬಂಧನದಿಂದ ಬಿಡಿಸಿದಾಗ ತಾಯಿ ಮೃತರಾಗಿದ್ದರು ಎನ್ನಲಾಗಿದೆ. ಹಸಿವು ಮತ್ತು ಬಾಯಾರಿಕೆಯಿಂದ ತಾಯಿಮೃತರಾಗಿದ್ದರು. ತಾಯಿಯ ಮೃತಳಾದ ಬಳಿಕ ಚೆಂಗ್ ಸ್ವತಃ ಪೊಲೀಸರಿಗೆ ಶರಣಾಗಿದ್ದಾಳೆ.

ಚೀನದಲ್ಲಿ 200ಕ್ಕೂ ಹೆಚ್ಚು ಬೂಟ್‌ಕೆಂಪ್ ನಡೆಸಲಾಗುತ್ತಿದೆ. ಚೀನದಲ್ಲಿ ಇಂಟರ್‌ನೆಟ್ ಚಟ ಅಂಟಿಸಿಕೊಂಡವರನ್ನು ಚಟಬಿಡಿಸಲು ಅಲ್ಲಿಗೆ ಕಳುಹಿಸಲಾಗುತ್ತದೆ. ಸೇನೆಯ ರೀತಿಯಲ್ಲಿ ಅಲ್ಲಿ ಶಿಸ್ತು ಇದ್ದು, ಕೆಲವೊಮ್ಮೆ ಶಾರೀರಿಕ ಯಾತನೆಯನ್ನು ಅನುಭವಿಸಬೇಕಾಗುತ್ತದೆ.

ಇಂಟರ್‌ನೆಟ್ ಚಟ ಅಂಟಿಸಿಕೊಂಡಿದ್ದ ಚೆಂಗ್ ಝಿರಾನ್ ಅದರಿಂದ ದೂರವಿರುವಂತೆ ತಿಳಿಸಿದಾಗ ಒಮ್ಮೆ ತನ್ನ ತಂದೆಯ ಮೇಲೆ ಯೇ ಚಾಕುವಿನಿಂದ ಹಲ್ಲೆಗೆ ಮುಂದಾಗಿದ್ದಳು. ಆನಂತರ ಮನೆಯವರು ಚೆಂಗ್‌ಳನ್ನು ಬೂಟ್‌ಕೆಂಪ್‌ಗೆ ಕಳುಹಿಸಿದ್ದರು ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News