ಜಿಂಕೆಗೆ ವ್ಯಾನ್ ಢಿಕ್ಕಿ: ವ್ಯಾನ್‌ನ ಗಾಜು ಪುಡಿ!
Update: 2016-10-04 19:25 IST
ಸುಳ್ಯ, ಅ.4: ವ್ಯಾನೊಂದು ಜಿಂಕೆಗೆ ಢಿಕ್ಕಿ ಹೊಡೆದ ಪರಿಣಾಮ ಜಿಂಕೆ ಗಾಯಗೊಂಡು ವ್ಯಾನ್‌ನ ಗಾಜು ಪುಡಿಯಾದ ಘಟನೆ ಸುಳ್ಯದ ಗೂನಡ್ಕ ಸಮೀಪ ಸಂಭವಿಸಿದೆ.
ವ್ಯಾನ್ ಸುಳ್ಯದಿಂದ ಕೊಯನಾಡು ಕಡೆಗೆ ತೆರಳುತ್ತಿದ್ದ ವೇಳೆ ಗೂನಡ್ಕ ಬಳಿ ಗುಡ್ಡದ ಮೇಲಿಂದ ರಸ್ತೆಗೆ ಇಳಿದು ಪಕ್ಕದ ಕಾಡಿಗೆ ತೆರಳುತ್ತಿದ್ದ ಜಿಂಕೆ ವ್ಯಾನ್‌ನ್ನು ಕಂಡು ಗಾಬರಿಗೊಂಡು ಓಡಿದ್ದು, ವ್ಯಾನ್‌ಗೆ ಢಿಕ್ಕಿಯಾಗಿದೆ.
ಘಟನೆಯಿಂದ ವ್ಯಾನ್‌ನ ಗಾಜು ಪುಡಿಯಾಗಿದ್ದು ಜಿಂಕೆಯ ಮುಖಕ್ಕೂ ಗಾಯವಾಗಿದೆ.