×
Ad

ಭೌತಶಾಸ್ತ್ರ ನೊಬೆಲ್ ಪ್ರಕಟ

Update: 2016-10-04 20:04 IST

 ಸ್ಟಾಕ್‌ಹೋಮ್ (ಸ್ವೀಡನ್), ಅ. 4: ವಿನೂತನ ಜಗತ್ತಿನ ಪದಾರ್ಥ (ಇಕ್ಸಾಟಿಕ್ ಮ್ಯಾಟರ್)ದ ರಹಸ್ಯಗಳನ್ನು ತೆರೆದಿಟ್ಟಿರುವುದಕ್ಕಾಗಿ ಬ್ರಿಟಿಶ್ ವಿಜ್ಞಾನಿಗಳಾದ ಡೇವಿಡ್ ತೌಲಿಸ್, ಡಂಕನ್ ಹ್ಯಾಲ್ಡೇನ್ ಮತ್ತು ಮೈಕಲ್ ಕೋಸ್ಟರ್‌ಲಿಟ್ಝ್ 2016ರ ಸಾಲಿನ ಭೌತಶಾಸ್ತ್ರಕ್ಕಾಗಿನ ನೊಬೆಲ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.

 ‘‘ಪದಾರ್ಥವು ವಿಚಿತ್ರ ಸ್ಥಿತಿಗಳನ್ನು ಹೊಂದಬಲ್ಲ ಅಪರಿಚಿತ ಜಗತ್ತೊಂದರ ಬಾಗಿಲನ್ನು ಈ ವರ್ಷದ ವಿಜೇತರು ತೆರೆದಿದ್ದಾರೆ. ಸೂಪರ್‌ಕಂಡಕ್ಟರ್ಸ್, ಸೂಪರ್‌ಫ್ಲೂಯಿಡ್ಸ್ ಅಥವಾ ತೆಳು ಕಾಂತೀಯ (ಮ್ಯಾಗ್ನೆಟಿಕ್) ಫಿಲ್ಮ್‌ಗಳಂಥ ಪದಾರ್ಥಗಳ ಅಸಾಮಾನ್ಯ ಮಜಲುಗಳು ಅಥವಾ ಸ್ಥಿತಿಗಳನ್ನು ಅಧ್ಯಯನ ಮಾಡಲು ಅವರು ಆಧುನಿಕ ಗಣಿತಶಾಸ್ತ್ರೀಯ ವಿಧಾನಗಳನ್ನು ಬಳಸಿದ್ದಾರೆ. ಅವರ ಈ ಮಹತ್ವದ ಕಾರ್ಯದಿಂದಾಗಿ ಪದಾರ್ಥದ ನೂತನ ಹಾಗೂ ಅಪರಿಚಿತ ಮಜಲುಗಳ ಬೇಟೆ ಈಗ ನಡೆಯುತ್ತಿದೆ’’ ಎಂದು ನೊಬೆಲ್ ಪ್ರಶಸ್ತಿಯ ತೀರ್ಪುಗಾರರ ಮಂಡಳಿ ಹೇಳಿದೆ.

ಪ್ರಶಸ್ತಿ ವಿಜೇತರು 8 ಮಿಲಿಯ ಸ್ವೀಡಿಶ್ ಕ್ರೋನರ್ (ಸುಮಾರು 6.2 ಕೋಟಿ ರೂಪಾಯಿ) ಮೊತ್ತವನ್ನು ಹಂಚಿಕೊಳ್ಳಲಿದ್ದಾರೆ. ತೌಲಿಸ್ ಪ್ರಶಸ್ತಿ ಮೊತ್ತದ ಅರ್ಧ ಭಾಗವನ್ನು ಗೆದ್ದರೆ, ಉಳಿದವರು ಉಳಿದ ಅರ್ಧವನ್ನು ಹಂಚಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News