×
Ad

ಐಸಿಸ್ ಸಂಬಂಧ ಶಂಕೆ: ಕಾನೂನು ವಿದ್ಯಾರ್ಥಿ ವಶಕ್ಕೆ

Update: 2016-10-04 22:46 IST

ಕೊಯಮತ್ತೂರು, ಅ.4: ಐಸಿಸ್ ಸಂಪರ್ಕದ ಶಂಕೆಯಲ್ಲಿ ಕೇರಳದಿಂದ 6 ಮಂದಿಯನ್ನು ಬಂಧಿಸಿರುವ ಬೆನ್ನಲ್ಲೇ, ಎನ್‌ಐಎ ಇಂದು ಭಯಂಕರ ಭಯೋತ್ಪಾದನೆ ಜಾಲದೊಂದಿಗಿನ ಸಂಬಂಧದ ಕುರಿತು ತನಿಖೆಗಾಗಿ ನಗರದಿಂದ ಕಾನೂನು ವಿದ್ಯಾರ್ಥಿಯೊಬ್ಬನನ್ನು ವಶಕ್ಕೆ ಪಡೆದುಕೊಂಡಿದೆಯೆಂದು ಪೊಲೀಸರಿಂದು ತಿಳಿಸಿದ್ದಾರೆ.

ಎನ್‌ಐಎ ಅಧಿಕಾರಿಗಳು ಈ ಸಂಬಂಧ ನಗರದ ನಾಲ್ವರು ಯುವಕರನ್ನು ವಶಪಡಿಸಿಕೊಂಡಿದ್ದರಾದರೂ, ವಿಚಾರಣೆಯ ಬಳಿಕ ನಿನ್ನೆ ಬಿಡುಗಡೆಗೊಳಿಸಿದ್ದರು. ಆದಾಗ್ಯೂ, ಅವರು ಕಾನೂನು ವಿದ್ಯಾರ್ಥಿಯನ್ನು ಇಂದು ಮುಂಜಾನೆ ಇಲ್ಲಿನ ಪೊಲೀಸ್ ಆಯುಕ್ತರ ಕಚೇರಿಗೆ ತಂದಿದ್ದರೆಂದು ಪೊಲೀಸ್ ಗುಪ್ತಚರ ವಿಭಾಗ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News