×
Ad

ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ: ಏಳು ಮಂದಿ ವಶಕ್ಕೆ

Update: 2016-10-04 22:59 IST

ಮಂಗಳೂರು, ಅ.4: ನಗರದ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ವಸತಿಗೃಹವೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಇನ್ಸ್‌ಪೆಕ್ಟರ್ ಸುನಿಲ್ ವೈ. ನಾಯಕ್ ದಾಳಿ ನಡೆಸಿ ಏಳು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಸೋಮವಾರ ರಾತ್ರಿ ಸುಮಾರು 9 ಗಂಟೆಗೆ ಓಲ್ಡ್ ಕೆಂಟ್ ರಸ್ತೆಯಲ್ಲಿರುವ ಕರುಣಾ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಇನ್ಸ್‌ಪೆಕ್ಟರ್ ಸುನಿಲ್ ನಾಯಕ್ ಅವರಿಗೆ ಮಾಹಿತಿ ಲಭಿಸಿತ್ತು. ಮಾಹಿತಿಯ ಆಧಾರದಲ್ಲಿ ಸಿಬ್ಬಂದಿಯೊಂದಿಗೆ ಲಾಡ್ಜ್‌ಗೆ ದಾಳಿ ನಡೆಸಿದಾಗ ವಸತಿಗೃಹದ ಬಳಿ ಲಾಡ್ಜ್‌ನ ಮೆನೇಜರ್ ಜಗದೀಶ್ ಎಂಬವರು ನಿಂತಿದ್ದರು. ಅವರನ್ನು ವಿಚಾರಿಸಲಾಗಿ ವೇಶ್ಯಾವಾಟಿಕೆ ನಡೆಯುತ್ತಿರುವ ಬಗ್ಗೆ ಒಪ್ಪಿಕೊಂಡಿದ್ದಲ್ಲದೆ, ಕೆಲವರು ಲಾಡ್ಜ್‌ನಲ್ಲಿರುವುದಾಗಿ ತಿಳಿಸಿದ್ದಾರೆ ಎಂದು ಪೊಲೀಸ್ ಮೂಲ ತಿಳಿಸಿದೆ.

 ಅದರಂತೆ ಪೊಲೀಸರು ಲಾಡ್ಜ್‌ನ ರೂಂ ಬಾಯ್ ಜಯಂತ್, ಮುಝಮ್ಮಿಲ್, ಕೊಂಡೂರು ಎನ್ನಾಡಿ, ರವೀಂದ್ರನಾಥ ಸಮ್ಸಾಲ್, ಸಿದ್ದೀಕ್, ಸುನಿಲ್ ಕೆ., ಮತ್ತೋರ್ವ ಸಿದ್ದೀಕ್ ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಅಲ್ಲದೆ, ಜಗದೀಶ್ ಬಳಿ ಇದ್ದ 3,420 ನಗದು, ಎರಡು ಮೊಬೈಲ್ ಹಾಗೂ ಪ್ಲಾಸ್ಟಿಕ್ ಲಕೋಟೆಯಲ್ಲಿದ್ದ ಕೆಲವು ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ಮುಂದಿನ ಕ್ರಮಕ್ಕೆ ಮಂಗಳೂರು ದಕ್ಷಿಣ ಠಾಣೆಗೆ ಹಸ್ತಾಂತರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News