×
Ad

ಮಾರಿಪಳ್ಳ-ಸಜೀರು ಮಲ್ಲಿ ಮಸೀದಿ ಪದಾಧಿಕಾರಿಗಳ ಆಯ್ಕೆ

Update: 2016-10-04 23:34 IST

ವಿಟ್ಲ, ಅ.4: ಮಾರಿಪಳ್ಳ ಸಮೀಪದ ಸುಜೀರು-ಮಲ್ಲಿ ಹೈದ್ರೋಸಿಯಾ ಜುಮಾ ಮಸೀದಿಯ 2016-17ನೆ ಸಾಲಿನ ನೂತನ ಗೌರವಾಧ್ಯಕ್ಷರಾಗಿ ವೌಲಾನಾ ಅಬ್ದುರ್ರಝಾಕ್ ಹಾಜಿ ಮಲೇಶಿಯಾ, ಅಧ್ಯಕ್ಷರಾಗಿ ಇಬ್ರಾಹೀಂ (ಮೋನು) ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಎಸ್. ಇಬ್ರಾಹೀಂ ಆಯ್ಕೆಯಾಗಿದ್ದಾರೆ.

ಮಸೀದಿ ಗೌರವಾಧ್ಯಕ್ಷ ವೌಲಾನಾ ಅಬ್ದುರ್ರಝಾಕ್ ಹಾಜಿ ಮಲೇಶಿಯಾ ಅವರ ಅಧ್ಯಕ್ಷತೆಯಲ್ಲಿ ನಡೆದ ಮಸೀದಿಯ ವಾರ್ಷಿಕ ಮಹಾಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಸ್ಥಳೀಯ ಖತೀಬ್ ರಝಾಕ್ ಅಹ್ಸನಿ ದುಆ ನೆರವೇರಿಸಿದರು.

ಉಪಾಧ್ಯಕ್ಷರಾಗಿ ಅಬ್ದುಲ್ ಖಾದರ್ ಕೆ.ಕೆ., ಅಬ್ದುರ್ರಝಾಕ್ ಎನ್., ಜೊತೆ ಕಾರ್ಯದರ್ಶಿಗಳಾಗಿ ಅಬೂಬಕ್ಕರ್ ಸಿದ್ದೀಕ್ ಮಲ್ಲಿ, ರಿಯಾಝ್, ಕೋಶಾಧಿಕಾರಿಯಾಗಿ ಅಬೂಬಕರ್ (ಪುತ್ತ), ಲೆಕ್ಕ ಪರಿಶೋಧಕರಾಗಿ ಮುಹಮ್ಮದ್ ಶರೀಫ್ (ಉಂಞ), ಸಲಹೆಗಾರರಾಗಿ ಚೆಂಗಳಂ ಅಬ್ದುಲ್ಲ ಪೈಝಿ ಮಸ್ಕತ್ ಹಾಗೂ ಪಾತೂರು ಮಾಹಿನ್ ದಾರಿಮಿ ಅವರನ್ನು ಆರಿಸಲಾಗಿದೆ.

ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಸಿ.ಎಚ್. ಹಮೀದ್, ಪಿ.ಎಚ್. ಸಲಾಂ, ಮುಸ್ತಫಾ, ಕಬೀರ್, ಅಶ್ರಫ್, ಶರೀಫ್ ಎನ್., ಹನೀಫ್ ಎನ್., ಬಶೀರ್, ಅಝೀಝ್, ಮುಹಮ್ಮದ್ ಅಲಿ, ಶರೀಫ್ ಮಲ್ಲಿ, ಅಶ್ರಫ್ ಕೆ.ಎಂ., ಹಫೀಝ್ ಅವರನ್ನು ನೇಮಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News