ಜಗತ್ತಿನ ಬಡ ಮಕ್ಕಳ ಪೈಕಿ ಎಷ್ಟು ಶೇಕಡಾ ಭಾರತದಲ್ಲಿದ್ದಾರೆ ಗೊತ್ತೇ?

Update: 2016-10-05 05:33 GMT

ಯುನೈಟೆಡ್ ನ್ಯಾಶನ್ಸ್: ಅ.5: ಜಗತ್ತಿನ ಅತಿ ಬಡತನದಲ್ಲಿ ಬೆಳವಣಿಗೆಯಾಗುತ್ತಿರುವ 3.5 ಕೋಟಿ ಮಕ್ಕಳಲ್ಲಿ ಶೇ.30ರಷ್ಟು ಮಕ್ಕಳು ಭಾರತದಲ್ಲಿದ್ದಾರೆ ಎಂದು ಯುನಿಸೆಫ್ "ಎಂಡಿಂಗ್ ಎಕ್ ಸ್ಟ್ರೀಂ ಪೊವರ್ಟಿ ಎ ಫೊಕಸ್ ಆನ್ ಚಿಲ್ಡ್ರನ್ ಎಂಬ ಹೆಸರಿನಲ್ಲಿ ಪ್ರಕಟಿಸಿದ ವರದಿಯಲ್ಲಿ ವಿವರಿಸಲಾಗಿದೆ ಎಂದು ವರದಿಯಾಗಿದೆ.

ಸಬ್ ಸಹಾರನ್ ಆಫ್ರಿಕ ಬಡತನ ಮತ್ತು ಹಸಿವಿನಿಂದ ನಲುಗುತ್ತಿರುವ ಅತಿಹೆಚ್ಚು ಮಕ್ಕಳನ್ನು ಹೊಂದಿವೆ. ಇಲ್ಲಿ ಈಅವಸ್ಥೆಯಲ್ಲಿ ಬದುಕುವ ಶೇ.50ರಷ್ಟು ಮಕ್ಕಳಿದ್ದಾರೆ. ಇದಕ್ಕೆ ನಿಕಟ ದಕ್ಷಿಣೇಶ್ಯವಿದೆ. ದಕ್ಷೀಣೇಶ್ಯದಲ್ಲಿ ಶೇ.36 ಇಂತಹ ಮಕ್ಕಳಿದ್ದಾರೆ. ಇವರಲ್ಲಿ ಶೇ.30ರಷ್ಟು ಮಕ್ಕಳು ಭಾರತದವರು ಎಂದು ವರದಿ ತಿಳಿಸಿದೆ.ಭಾರತದ ಗ್ರಾಮಗಳ ಐದು ಮಕ್ಕಳಲ್ಲಿ ನಾಲ್ವರು ಅತ್ಯಂತ ಬಡತನದ ಹಿನ್ನೆಲೆಯಲ್ಲಿ ಬೆಳೆಯುತ್ತಿದ್ದಾರೆ. ಮಕ್ಕಳು ದಾಟಿಬರುತ್ತಿರುವ ಬಡತನ ಅವರ ಭವಿಷ್ಯವನ್ನು ಮಾತ್ರವಲ್ಲ ಅವರಿರುವ ಸಮಾಜವನ್ನೇ ಹಿಂದುಳಿಯುವಂತೆ ಮಾಡುತ್ತಿದೆ ಎಂದು ಯುನಿಸೆಫ್ ಎಕ್ಸಿಕ್ಯೂಟಿವ್ ಡೈರೆಕ್ಟರ್ ಆಂಟನಿ ಲೇಕ್ ಹೇಳಿದ್ದಾರೆ.

ಬಡ ಕುಟುಂಬಗಳಿಗೆ ಆಹಾರ, ಆರೋಗ್ಯ, ವಿದ್ಯಾಭ್ಯಾಸ ಇತರ ಸೌಕರ್ಯಗಳು ಹಾಗೂ ಅವರಿಗೆ ಉಪಯುಕ್ತವಾಗುವ ರೀತಿಯಲ್ಲಿ ಧನಸಹಾಯಗಳ ಸಹಿತ ಶಿಶು ಕೇಂದ್ರೀಕೃತ ಸಾಮಾಜಿಕ ಸುಧಾರಣೆ ಸಂಪ್ರದಾಯವನ್ನು ಸರಕಾರಗಳು ಬಲಪಡಿಸಬೇಕೆಂದು ಯುನಿಸೆಫ್ ಆಗ್ರಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News