ರಾಹುಲ್‌ರನ್ನು ಭೇಟಿ ಮಾಡಿದ ಸಿಧು : ಕಾವೇರಿದ ಪಂಜಾಬ್‌ನ ರಾಜಕೀಯ
ಜಲಂಧರ್,ಅ.5: ಆಮ್ ಆದ್ಮಿ ಮತ್ತು ಕಾಂಗ್ರೆಸ್‌ನಲ್ಲಿ ಸೇರ್ಪಡೆಗೊಳ್ಳುವ ವಿಚಾರದ ನಡುವೆ ಸಿಕ್ಕಿಹಾಕಿಕೊಂಡಿರುವ ಆವಾಝ್ ಎ ಪಂಜಾಬ್ ಮುಖ್ಯಸ್ಥ ನವಜೋತ್‌ಸಿಂಗ್ ಸಿಧು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರನ್ನು ದಿಲ್ಲಿಯಲ್ಲಿ ಭೇಟಿಯಾಗಿದ್ದು, ಇದು ಪಂಜಾಬ್‌ನ ರಾಜಕೀಯ ವಲಯದಲ್ಲಿ ಭಾರೀ ಚರ್ಚಾಗ್ರಸ್ತವಾಗಿದೆ ಎಂದು ವೆಬ್‌ಪೋರ್ಟಲೊಂದು ವರದಿ ಮಾಡಿದೆ.
ಸಿದ್ಧು ಭೇಟಿಯ ನಂತರ ರಾಹುಲ್ ಕ್ಯಾಪ್ಟನ್ ಅಮರೇಂದ್ರ ಸಿಂಗ್‌ರನ್ನು ದಿಲ್ಲಿಗೆ ಬರುವಂತೆ ಕರೆದಿದ್ದಾರೆ. ಕ್ಯಾಪ್ಟನ್ ಅಕ್ಟೋಬರ್ ಏಳರವರೆಗೆ ದಿಲ್ಲಿಯಲ್ಲೇ ಉಳಿಯಲಿದ್ದಾರೆ. ಸಿಧೂರ ನಿಕಟವರ್ತಿಗಳು ಅಕ್ಟೋಬರ್ ಏಳರೊಳಗೆ ತಾವು ಯಾವುದಾದರೊಂದು ತೀರ್ಮಾನ ಕೈಗೊಳ್ಳಲಿದ್ದೇವೆ ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಆಮ್ ಆದ್ಮಿಯ ಸಂಜಯ್ ಸಿಂಗ್ ತಮ್ಮ ಪಾರ್ಟಿ ಪಂಜಾಬ್‌ನ ವಿಧಾನಸಭೆಯ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಅವರು ಹೇಳುವ ಪ್ರಕಾರ ಅದು ಸ್ವತಂತ್ರವಾಗಿ ಸ್ಪರ್ಧಿಸಲಿದೆ. ಕ್ಯಾಪ್ಟನ್ ಅಮರೇಂದ್ರ ಸಿಂಗ್ ಮಂಗಳವಾರ ಅಮೃತಸರದ ಗಡಿ ಗ್ರಾಮಗಳಲ್ಲಿ ಪ್ರವಾಸದಲ್ಲಿದ್ದರು. ಅವರು ದಿಲ್ಲಿಗೆ ಬಂದು ಅಕ್ಟೋಬರ್ ಏಳರಂದು ಮತ್ತೆ ಅಮೃತಸರಕ್ಕೆ ತೆರಳುವವರಿದ್ದರು. ಆದರೆ ಅದನ್ನು ಅಕ್ಟೋಬರ್ ಹತ್ತರವರೆಗೆ ಮುಂದೂಡಿದ್ದಾರೆ.
ಮೂಲಗಳು ತಿಳಿಸುವ ಪ್ರಕಾರ ರಾಹುಲ್ ಗಾಂಧಿ ಮತ್ತು ಸಿದ್ಧೂರ ನಡುವಿನ ಮೊದಲ ಭೇಟಿ ನಿರೀಕ್ಷೆ ಹುಟ್ಟಿಸಿದೆ. ಅವರಿಬ್ಬರ ಪಕ್ಷಗಳ ನಡುವೆ ಹೊಂದಾಣಿಕೆ ಆದರೆ ಸಿದ್ಧುರ ಅವಾಝ್ ಎ ಪಂಜಾಬ್ ಕಾಂಗ್ರೆಸ್‌ನ ಬಾಲ ಹಿಡಿಯಲಿದೆ. ಕಾಂಗ್ರೆಸ್ ಮೂಲಗಳು ಹೇಳಿರುವ ಪ್ರಕಾರ ಕಾಂಗ್ರೆಸ್ ರಣನೀತಿಕಾರ ಪ್ರಶಾಂತ್ ಕಿಶೋರ್ ಹಲವು ದಿವಸಗಳಿಂದ ರಾಹುಲ್ ಮತ್ತು ಸಿಧುರ ನಡುವೆ ಮಾತುಕತೆ ನಡೆಸುವ ಯತ್ನ ನಡೆಸುತ್ತಿದ್ದರು. ಇದೇವೇಳೆ ರಾಹುಲ್ ಮತ್ತು ಸಿಧು ಭೇಟಿಗಾಗಿ ಬಹುದೊಡ್ಡ ಪಾತ್ರವನ್ನು ಮುಹಮ್ಮದ್ ಅಝರುದ್ದೀನ್ ವಹಿಸಿದ್ದಾರೆಂದು ಹೆಳಲಾಗುತ್ತಿದೆ.
ಕಾಂಗ್ರೆಸ್ ನಾಯಕ ಚರಣ್‌ಜಿತ್ ಸಿಂಗ್ ಮಾತುಕತೆ ನಡೆಯುತ್ತಿದೆ. ಆದರೆ ವಿಷಯ ಯಾವ ಹಂತದಲ್ಲಿದೆ ಎಂದು ತನಗೆ ಗೊತ್ತಿಲ್ಲ ಎಂದುತಿಳಿಸಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಇನ್ನೊಬ್ಬ ನಾಯಕ ಪ್ರತಾಪ್ ಸಿಂಗ್ ತನಗೆ ಇಷ್ಟೇ ಗೊತ್ತು ವಿಷಯವನ್ನು ಪ್ರಶಾಂತ್ ನೋಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. ಅಂದರೆ ಸಿಧುರ ಆವಾಝ್ ಎ ಪಂಜಾಬ್ ಜೊತೆ ಮೈತ್ರಿ ಅಥವಾ ಸಿದ್ಧು ಕಾಂಗ್ರೆಸ್ ಸೇರುತ್ತಾರೋ ಎಂಬ ಬಗ್ಗೆ ಈ ಏನೂ ಹೇಳುವಂತಿಲ್ಲ ಎಂದು ಪ್ರತಾಪ್ ಸಿಂಗ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆಂದು ವರದಿ ತಿಳಿಸಿದೆ.