×
Ad

ಶಾಯಿ ಎರಚಿದ ಮಹಿಳೆಗೆ ದೇವರು ಒಳ್ಳೆಯದು ಮಾಡಲಿ ಎಂದ ಕೇಜ್ರಿವಾಲ್

Update: 2016-10-05 13:06 IST

ಹೊಸದಿಲ್ಲಿ, ಅ.5: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ರ ಮೇಲೆ ಶಾಯಿ(ಮಸಿ)ಎರಚಿದ ಘಟನೆ ಮತ್ತೊಮ್ಮೆ ಬೆಳಕಿಗೆ ಬಂದಿದೆ. ಅವರು ರಾಜಸ್ಥಾನದ ಬಿಕಾನೇರ್‌ನಲ್ಲಿ ಛತ್ರಸಾಲ್ ಸ್ಟೇಡಿಯಂನಲ್ಲಿ ಆಡ್-ಇವನ್ ನಿಯಮಗಳ ಸಫಲತೆಯ ಕುರಿತು ಭಾಷಣ ಮಾಡುತ್ತಿದ್ದರು. ಈ ಪ್ರಕರಣದಲ್ಲಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಭಾಷಣದ ವೇಳೆ ಶಾಯಿ ಎರಚಿದವರಿಗೆ ದೇವನು ಒಳಿತು ಮಾಡಲಿ ಎಂದು ಕೇಜ್ರಿವಾಲ್ ಪ್ರಾರ್ಥಿಸಿದ್ದಾರೆ.

ಇದಕ್ಕಿಂತ ಮೊದಲು ಆಟೊ ಚಾಲಕ ಕಪಾಲಮೋಕ್ಷ ಮಾಡಿದ್ದ:

ಕೇಜ್ರಿವಾಲ್ ಭಾಷಣ ಮಾಡುತ್ತಿದ್ದಾಗ ಮಹಿಳೆಯೊಬ್ಬರು ಇಲ್ಲಿ ಶಾಯಿ ಎರಚಿದ್ದಾಳೆ. ಈ ಮಹಿಳೆಯ ಸಿಎನ್‌ಜಿ ಹಗರಣದ ಆರೋಪವನ್ನುಹೊರಿಸಿ ಈ ಕೃತ್ಯವೆಸಗಿದ್ದಾಳೆ. ಕೇಜ್ರಿವಾಲ್‌ರನ್ನು ಅಪಮಾನಿಸುವ ಘಟನೆ ಇದಕ್ಕೂ ಮೊದಲು ನಡೆದಿವೆ. 2014ರಲ್ಲಿ ಚುನಾವಣಾ ಪ್ರಚಾರದ ವೇಳೆ ಆಟೊಚಾಲಕನೊಬ್ಬ ಕಪಾಳಮೋಕ್ಷವನ್ನು ಮಾಡಿದ್ದ. ದಿಲ್ಲಿಯ ಸುಲ್ತಾನ್‌ಪುರಿಯಲ್ಲಿ ಜಾಥಾ ವೇಳೆ ಈ ಘಟನೆ ನಡೆದಿತ್ತು.

ಲೋಕಸಭಾ ಚುನಾವಣೆಯ ವೇಳೆಯೂ ಶಾಯಿ ಎರಚಲಾಗಿತ್ತು:

ಲೋಕಸಭಾ ಚುನಾವಣೆಯ ವೇಳೆ ವಾರಣಾಸಿಯ ಜಾಥಾದಲ್ಲಿ ಕೇಜ್ರಿವಾಲ್ ಮೇಲೆ ಶಾಯಿ ಎರಚಲಾಗಿತ್ತು. ದಿಲ್ಲಿಯ ವಿಧಾನಸಭಾ ಚುನಾವಣಾ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದಾಗ ಬಿಜೆಪಿ ಕಾರ್ಯಕರ್ತನೆನ್ನಲಾದ ಯುವಕನೊಬ್ಬ ಅವರ ಮೇಲೆ ಶಾಯಿ ಎರಚಿದ್ದ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News