×
Ad

ಫುಲ್ ಪ್ಯಾಂಟ್ ಧರಿಸಿ: ಆರೆಸ್ಸೆಸ್ ಗೆ ಮದ್ರಾಸ್ ಹೈಕೋರ್ಟ್ ಆದೇಶ

Update: 2016-10-05 15:18 IST

ಚೆನ್ನೈ, ಅ.5: ವಿಜಯದಶಮಿಯಂದು ತಮಿಳುನಾಡಿನ ಹಲವೆಡೆ ಆರೆಸ್ಸೆಸ್ ಆಯೋಜಿಸುವ ರ್ಯಾಲಿಗಳಲ್ಲಿ ಅದರ ಕಾರ್ಯಕರ್ತರು ಫುಲ್ ಪ್ಯಾಂಟುಗಳನ್ನೇ ತಮ್ಮ ಸಮವಸ್ತ್ರದ ಅಂಗವಾಗಿ ಧರಿಸಬೇಕೆಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದೆ.

ರಾಜ್ಯದಾದ್ಯಂತ ಕನಿಷ್ಠ 14 ಕಡೆಗಳಲ್ಲಿ ನಡೆಯಲಿರುವ ಮೆರವಣಿಗೆಗಳಲ್ಲಿ ಕನಿಷ್ಠ 200 ರಿಂದ 300 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಆದರೆ ಕನ್ಯಾಕುಮಾರಿ ಹಾಗೂ ಕೊಯಂಬತ್ತೂರಿನಲ್ಲಿ ಕನಿಷ್ಠ ಎರಡು ಸಾವಿರ ಮಂದಿ ಭಾಗವಹಿಸಬಹುದು. ಈ ಹಿಂದೆ ಪೊಲೀಸರು ಮೆರವಣಿಗೆಗಳನ್ನು ನಿಷೇಧಿಸಿದ್ದರೂ, ನ್ಯಾಯಾಲಯ ಮೆರವಣಿಗೆಗೆ ಅನುಮತಿಸಿದೆ. ಆದರೆ ಆರೆಸ್ಸೆಸ್ ಕಾರ್ಯಕರ್ತರು ಫುಲ್ ಪ್ಯಾಂಟ್ ಧರಿಸಬೇಕೆಂದು ಅದು ತಾಕೀತು ಮಾಡಿದೆ.

ಚೆನ್ನೈ ನಗರ ಪೊಲೀಸ್ ಕಾಯ್ದೆಯ ಪ್ರಕಾರ ಸೇನಾ ಪಡೆಗಳು ಅಥವಾ ಪೊಲೀಸರ ಸಮವಸ್ತ್ರಗಳನ್ನೇ ಹೋಲುವಂತಹ ದಿರಿಸು ಧರಿಸಿ ನಡೆಸಲಾಗುವ ಮೆರವಣಿಗೆಗೆಳನ್ನು ನಿಷೇಧಿಸಲಾಗುವುದು. ಆರೆಸ್ಸೆಸ್ ಸಂಘಟನೆಯ ಈ ಹಿಂದಿನ ಖಾಕಿ ಶಾರ್ಟ್ಸ್, ಬಿಳಿ ಶರ್ಟ್ ಸಮವಸ್ತ್ರ ರಾಜ್ಯದ ಪೊಲೀಸ್ ಫಿಸಿಕಲ್ ಟ್ರೈನಿಂಗ್ ಅಭ್ಯರ್ಥಿಗಳ ಸಮವಸ್ತ್ರವನ್ನೇ ಹೋಲುತ್ತದೆ.

ಆದರೆ ಆರೆಸ್ಸೆಸ್ ಕಾರ್ಯಕರ್ತರು ತಮ್ಮ ಕೈಯ್ಯಲ್ಲಿ ಹಿಡಿಯುವ ಬಿದಿರಿನ ಬೆತ್ತವನ್ನು ಪೊಲೀಸರು ಆಯುಧವೆಂದು ಪರಿಗಣಿಸುವುದರಿಂದ ಈ ಬಾರಿಯ ಮೆರವಣಿಗೆಯಲ್ಲಿ ಅವರು ಅದನ್ನು ಕೈಯ್ಯಲ್ಲಿ ಹಿಡಿದು ಮೆರವಣಿಗೆಯಲ್ಲಿ ಭಾಗವಹಿಸುವಂತಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News