ಪುತ್ತೂರು: ಶಾಲೆಯಿಂದ 1 ಲಕ್ಷ ರೂ. ವೌಲ್ಯದ ಸೊತ್ತು ಕಳವು
Update: 2016-10-05 17:42 IST
ಪುತ್ತೂರು, ಅ.5: ಶಾಲೆಯ ಕಚೇರಿಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು ರೂ.1 ಲಕ್ಷ ರೂ. ವೌಲ್ಯದ ಸೊತ್ತುಗಳನ್ನು ಕಳವು ಮಾಡಿರುವ ಘಟನೆ ಮಂಗಳವಾರ ರಾತ್ರಿ ಪುತ್ತೂರು ತಾಲೂಕಿನ ಕಾವು ಎಂಬಲ್ಲಿ ನಡೆದಿದೆ.
ಇಲ್ಲಿನ ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಕಳವು ಪ್ರಕರಣ ನಡೆದಿದ್ದು, ಶಾಲಾ ಕಚೇರಿಗೆ ಪ್ರವೇಶಿಸಿದ ಕಳ್ಳರು ಸಿಸಿ ಕೆಮರಾ, ಕಂಪ್ಯೂಟರ್, ದ್ವನಿವರ್ಧಕ ಮತ್ತು ಕಚೇರಿಯ ಕಡತಗಳು, ಚೆಕ್‌ಬುಕ್‌ಗಳನ್ನು ಕಳವು ಮಾಡಿದ್ದಾರೆ. ಬುಧವಾರ ಬೆಳಗ್ಗೆ ಘಟನೆ ಬೆಳಕಿಗೆ ಬಂದಿತ್ತು.
ಘಟನಾ ಸ್ಥಳಕ್ಕೆ ಎಎಸ್ಪಿ ರಿಷ್ಯಂತ್, ಗ್ರಾವಾಂತರ ಸರ್ಕಲ್ ಇನ್ಸ್‌ಪೆಕ್ಟರ್ ಅನಿಲ್ ಎಸ್. ಕುಲಕರ್ಣಿ, ಸಂಪ್ಯ ಎಸ್ ಐ ಅಬ್ದುಲ್‌ಖಾದರ್, ಹೊರ ಠಾಣಾ ಎಸ್ ಐ ವಿಠಲಶೆಟ್ಟಿ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರನ್ನು ಕರೆಸಲಾಗಿದ್ದು ತನಿಖೆ ಮುಂದುವರೆದಿದೆ. ಸಂಪ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.