×
Ad

ಕಾಸರಗೋಡು: ಹೋಟೆಲ್‌ಗಳಿಗೆ ಆರೋಗ್ಯಾಧಿಕಾರಿಗಳ ದಾಳಿ

Update: 2016-10-05 18:00 IST

ಕಾಸರಗೋಡು, ಅ.5: ಕಾಸರಗೋಡು ನಗರ ಹಾಗೂ ಹೊರವಲಯದ ಹೋಟೆಲ್‌ಗಳಿಗೆ ದಾಳಿ ನಡೆಸಿದ ನಗರಸಭಾ ಆರೋಗ್ಯಾಧಿಕಾರಿಗಳು ಹಳಸಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಂಡಿದ್ದಾರೆ. ಎರಡು ಪ್ರಮುಖ ಹೋಟೆಲ್‌ಗಳು ಸೇರಿದಂತೆ ಒಟ್ಟು ಐದು ಹೋಟೆಲ್‌ಗಳಿಂದ ಹಳಸಿದ ಆಹಾರ ಪದಾರ್ಥಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕಾಸರಗೋಡು ರೈಲ್ವೆ ನಿಲ್ದಾಣ ರಸ್ತೆಯ ಹೋಟೆಲ್ ಜಿದ್ದಾ, ಕರಂದಕ್ಕಾಡ್‌ನ ಉಡುಪಿ ಆರ್ಯಭವನ, ನುಳ್ಳಿಪ್ಪಾಡಿಯ ಹೈವೇ ಕಾಸಿಲ್, ಹೊಸ ಬಸ್ಸು ನಿಲ್ದಾಣ ಸಮೀಪದ ಜೆ.ಕೆ. ರೆಸಿಡೆನ್ಸಿ, ನಾಯಮ್ಮರ ಮೂಲೆಯ ಅರೆಬಿಯನ್ ಮೆಕ್ಸಿಕೋ ಹೋಟೆಲ್‌ಗಳಿಂದ ಹಳಸಿದ ಪದಾರ್ಥಗಳನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ನಗರಸಭಾ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.

ನಗರಸಭಾ ಆರೋಗ್ಯ ಮೇಲ್ವಿಚಾರಕ ಬಿ.ಬಿಜು, ಆರೋಗ್ಯಾಧಿಕಾರಿ ಮಧು, ಅಭಿಲಾಷ್, ಸುರ್ಜಿತ್, ಸುಧೀರ್ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News