×
Ad

ಕಾಸರಗೋಡು: ವೇತನ ವಿಳಂಬ ಖಂಡಿಸಿ ಕೆಎಸ್ಸಾರ್ಟಿಸಿ ನೌಕರರಿಂದ ಧರಣಿ

Update: 2016-10-05 18:15 IST

ಕಾಸರಗೋಡು, ಅ.5: ಕೆಎಸ್ಸಾರ್ಟಿಸಿ ನೌಕರರಿಗೆ ವೇತನ ವಿಳಂಬವನ್ನು ಪ್ರತಿಭಟಿಸಿ ನೌಕರರು ಮುಷ್ಕರ ನಡೆಸುತ್ತಿದ್ದು, ಬುಧವಾರ ಕಾಸರಗೋಡು ಜಿಲ್ಲೆಯಲ್ಲಿ ಬಸ್ಸು ಸಂಚಾರ ಭಾಗಶ: ಸ್ಥಗಿತಗೊಂಡಿತು.

ಐಎನ್‌ಟಿಯುಸಿ ಮತ್ತು ಬಿಎಂಎಸ್ ಸಂಘಟನೆಯ ನೇತೃತ್ವದಲ್ಲಿ ನೌಕರರು ಬುಧವಾರ ಬೆಳಗ್ಗಿನಿಂದ ಕೆಲಸಕ್ಕೆ ಹಾಜರಾಗಲಿಲ್ಲ. ಮುಷ್ಕರ ನಿರತ ಐಎನ್‌ಟಿಯುಸಿ ನೌಕರರು ಸಾಂಕೇತಿಕವಾಗಿ ಅಡುಗೆ ಮಾಡುವ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದರು.

ಮುಷ್ಕರದಿಂದ ಕಾಸರಗೋಡು -ಮಂಗಳೂರು, ಕಾಸರಗೋಡು -ಸುಳ್ಯ-ಪುತ್ತೂರು ಅಂತಾರಾಜ್ಯ ರೂಟಿನಲ್ಲಿ ಕೆಲವೇ ಬಸ್‌ಗಳು ಸಂಚರಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News