ಪುತ್ತೂರು: ಉಲಮಾಗಳ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಪದಾಧಿಕಾರಿಗಳ ಸ್ನೇಹ ಸಮ್ಮಿಲನ
ಪುತ್ತೂರು, ಅ.5: ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್, ಜಂ-ಇಯ್ಯತುಲ್ ಮುಅಲ್ಲಿಮೀನ್ ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿ ಜಂಟಿ ಆಶ್ರಯದಲ್ಲಿ ಹುಖೂಕುಲ್ ಇಬಾದ್ (ಮನುಕುಲದ ಸೇವೆ) ಅಭಿಯಾನದ ಅಂಗವಾಗಿ ಪುತ್ತೂರು, ಕೂರ್ನಡ್ಕ ಮತ್ತು ಕುಂಬ್ರ ರೇಂಜ್‌ಗೊಳಪಟ್ಟ ಉಲಮಾಗಳ ಹಾಗೂ ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಪದಾಧಿಕಾರಿಗಳ ಸ್ನೇಹ ಸಮ್ಮಿಲನವು ಪುತ್ತೂರಿನ ಬದ್ರಿಯಾ ಜುಮಾ ಮಸೀದಿ ಸಬಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪುತ್ತೂರು ಬದ್ರಿಯಾ ಜುಮಾ ಮಸೀದಿಯ ಖತೀಬ್ ಎಸ್.ಬಿ. ಮುಹಮ್ಮದ್ ದಾರಿಮಿ ಉದ್ಘಾಟಿಸಿದರು. ಸಮಸ್ತ ಮುಶಾವರ ಕರ್ನಾಟಕ ಸದಸ್ಯರಾದ ಇಬ್ರಾಹೀಂ ಬಾಖವಿ ಕೆ.ಸಿ.ರೋಡ್ ‘ಹುಖೂಕುಲ್ ಇಬಾದ್’ ಬಗ್ಗೆ ತರಗತಿ ನಡೆಸಿದರು.
ಪುತ್ತೂರು ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಹಾಜಿ ಯು. ಅಬ್ದುಲ್ಲ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೂರ್ನಡ್ಕ ರೇಂಜ್ ಜಂಇಯ್ಯತುಲ್ ಮುಅಲ್ಲಿಮೀನ್‌ನ ಅಧ್ಯಕ್ಷ ಉಮರ್ ಪೈಝಿ ಅಜ್ಜಿಕಟ್ಟೆ, ಕುಂಬ್ರ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಶಂಶುದ್ದೀನ್ ದಾರಿಮಿ, ಕುಂಬ್ರ ರೇಂಜ್ ಮದ್ರಸ ಮ್ಯಾನೇಜ್‌ಮೆಂಟಿನ ಅಧ್ಯಕ್ಷ ಹಿರಾ ಅಬ್ದುಲ್ ಖಾದರ್ ಹಾಜಿ ಮತ್ತು ಕೂರ್ನಡ್ಕ ರೇಂಜ್ ಮದ್ರಸ ಮ್ಯಾನೇಜ್‌ಮೆಂಟಿನ ಅಧ್ಯಕ್ಷ ಅಬೂಬಕ್ಕರ್ ಕೆ. ಉಪಸ್ಥಿತರಿದ್ದರು. ಹುಸೈನ್ ದಾರಿಮಿ ಕೆ.ಐ.ಸಿ ಕುಂಬ್ರ, ಅಬೂಬಕರ್ ಸಿದ್ದೀಕ್ ಜಲಾಲಿ ಕೂರ್ನಡ್ಕ ಖತೀಬ್, ತಾಜುದ್ದೀನ್ ರಹ್ಮಾನಿ ಬೆಳ್ಳಾರೆ ಖತೀಬ್ ಶುಭ ಹಾರೈಸಿದರು.
ಟ್ಯಾಲೆಂಟ್ ಸಲಹೆಗಾರ ರಫೀಕ್ ಮಾಸ್ಟರ್ ‘ಮನುಕುಲದ ಸೇವೆ ಹೇಗೆ?’ ಎಂಬ ವಿಷಯದಲ್ಲಿ ತರಬೇತಿ ನೀಡಿದರು.
ಪುತ್ತೂರು ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಆಸಿಪ್ ಅಝ್‌ಹರಿ ದುಆ ನೆರವೇರಿಸಿದರು. ಕುಂಬ್ರ ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್‌ನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್ ಸ್ವಾಗತಿಸಿದರು. ಟ್ಯಾಲೆಂಟ್ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಪ್ರಸ್ತಾವನೆಗೈದರು. ಕಾರ್ಯಕ್ರಮದ ಸಂಯೋಜಕ ಅಶ್ಫರ್ ಹುಸೈನ್ ಬೆಂಗರೆ ವಂದಿಸಿದರು. ಕೋಡಿಂಬಾಡಿ ಖತೀಬ್ ಕೆ.ಎಂ.ಎ. ಕೊಡುಂಗೈ ಕಾರ್ಯಕ್ರಮ ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಪುತ್ತೂರು ತಾಲೂಕಿನ ಮೂರು ರೇಂಜ್‌ಗಳ ಅನೇಕ ಮಸೀದಿಗಳ ಖತೀಬರು, ಸದರ್ ಮುಅಲ್ಲಿಮರು ಮತ್ತು ಮದ್ರಸ ಮ್ಯಾನೇಜ್‌ಮೆಂಟ್ ಕಮಿಟಿಯ ಪದಾಧಿಕಾರಿಗಳು ಭಾಗವಹಿಸಿದ್ದರು.