ಕರಾಚಿ, ಲಾಹೋರ್‌ಗಳ ವಾಯು ಪ್ರದೇಶ ಮುಚ್ಚಿದ ಪಾಕಿಸ್ತಾನ

Update: 2016-10-05 18:57 GMT

ಇಸ್ಲಾಮಾಬಾದ್, ಅ. 5: ಕರಾಚಿ ಮತ್ತು ಲಾಹೋರ್‌ಗಳಲ್ಲಿನ ತನ್ನ ವಾಯುಪ್ರದೇಶವನ್ನು ಪಾಕಿಸ್ತಾನ ಮುಚ್ಚಲಿದೆ.
ಅಕ್ಟೋಬರ್ 8ರಿಂದ 13 ದಿನಗಳ ಕಾಲ ಕರಾಚಿ ಮತ್ತು ಲಾಹೋರ್‌ಗಳ ವಾಯುಪ್ರದೇಶವು ದಿನಕ್ಕೆ 18 ಗಂಟೆಗಳ ಕಾಲ ಮುಚ್ಚಿರುತ್ತದೆ ಎಂದು ಪಾಕಿಸ್ತಾನ ಹೊರಡಿಸಿದ ಸೂಚನೆಯೊಂದು ತಿಳಿಸಿದೆ.
ಪಾಕಿಸ್ತಾನದ ಸೇನಾ ವಿಮಾನಗಳು ಕಸರತ್ತುಗಳು ಮತ್ತು ಅಭ್ಯಾಸಗಳನ್ನು ನಡೆಸಲು ಸಾಧ್ಯವಾಗುವಂತೆ ತಗ್ಗಿನ ವಾಯು ಪ್ರದೇಶವನ್ನು ಮುಚ್ಚಿರುವ ಸಾಧ್ಯತೆಯಿದೆ ಎಂದು ಭಾರತೀಯ ವಿಮಾನಯಾನ ಕಂಪೆನಿಯೊಂದರ ಹಿರಿಯ ಅಂತಾರಾಷ್ಟ್ರೀಯ ಮಾರ್ಗ ಯೋಜಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
‘‘ಭಾರತವನ್ನು ಗುರಿಯಿರಿಸಿ ಈ ತಂತ್ರಗಾರಿಕೆಗಳನ್ನು ನಡೆಸಲಾಗುತ್ತಿದೆ. ಕರಾಚಿಯು ರಾಜಸ್ಥಾನ ಮತ್ತು ಗುಜರಾತ್ ಗಡಿಗೆ ಹಾಗೂ ಲಾಹೋರ್ ಜಮ್ಮು ಮತ್ತು ಕಾಶ್ಮೀರ ಮತ್ತು ಪಂಜಾಬ್ ಗಡಿಗೆ ತುಂಬಾ ಹತ್ತಿರವಿದೆ’’ ಎಂದು ಅವರು ಹೇಳುತ್ತಾರೆ.
‘‘ಪಾಕಿಸ್ತಾನದ ಪರಮಾಣು ಸಂಸ್ಥಾಪನೆಗಳು ಲಾಹೋರ್‌ನ ಬಲಭಾಗದಲ್ಲಿವೆ. ಆ ಮಾರ್ಗವಾಗಿ ಹೋಗಲು ನಮಗೆ ಯಾವತ್ತೂ ಅನುಮತಿ ನೀಡಲಾಗಿಲ್ಲ. ಕರಾಚಿ ಮತ್ತು ಈಗ ಲಾಹೋರ್‌ನ ವಾಯು ಪ್ರದೇಶಗಳಲ್ಲಿ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿದೆಯೆಂದರೆ, ಪಾಕಿಸ್ತಾನ ಅಲ್ಲಿ ವೈಮಾನಿಕ ಯುದ್ಧಾಭ್ಯಾಸ ನಡೆಸುತ್ತಿದೆ ಎಂದರ್ಥ’’ ಎಂಬುದಾಗಿ ಇನ್ನೋರ್ವ ಹಿರಿಯ ಕಮಾಂಡರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News