ಕೇಂದ್ರ ಸರಕಾರ ಅಡಿಕೆಗೆ ಪ್ರತ್ಯೇಕ ಮಂಡಳಿ ಸ್ಥಾಪಿಸಬೇಕು: ಐವನ್ ಡಿಸೋಜ
Update: 2016-10-06 11:18 IST
ಮಂಗಳೂರು, ಅ.6: ಕೇಂದ್ರ ಸರಕಾರವು ಶೀಘ್ರವೇ ಅಡಿಕೆಗೆ ಪ್ರತ್ಯೇಕ ಮಂಡಳಿ ಸ್ಥಾಪನೆಯನ್ನು ಮಾಡಬೇಕು ಎಂದು ವಿಧಾನಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಆಗ್ರಹಿಸಿದ್ದಾರೆ.
ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ವಿಧಾನಪರಿಷತ್ ಸದಸ್ಯ ನಾದ ಆರಂಭದಲ್ಲೇ ವಿಧಾನಪರಿಷತ್ ನಲ್ಲಿ ಪ್ರಶ್ನಿಸಿದ್ದು ಇದರ ಆಧಾರದ ಮೇಲೆ ಅಡಿಕೆಗೆ ಪ್ರತ್ಯೇಕ ಮಂಡಳಿ ರಚನೆ ಕುರಿತು ತಜ್ಞರ ಸಮಿತಿಯ ವರದಿ ಬಂದಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು 2017-18ನೆ ಸಾಲಿನ ಬಜೆಟ್ ನಲ್ಲಿಯೆ ಈ ಬಗ್ಗೆ ಮಂಡನೆ ಮಾಡಬೇಕು. ಇದಕ್ಕಾಗಿ ಹಣವನ್ನು ಬಜೆಟ್ ನಲ್ಲಿ ಮೀಸಲಿಡಬೇಕು, ಮತ್ತು ದ.ಕ.ದಲ್ಲಿ ಮಂಡಳಿಯ ಕೇಂದ್ರ ಸಮಿತಿ ಯ ಕಚೇರಿ ಇರಬೇಕು ಎಂದು ಒತ್ತಾಯಿಸಿದರು.