ಅಮೆರಿಕದಲ್ಲಿ 24 ಕುವೈಟ್ ಪ್ರಜೆಗಳ ಬಂಧನ

Update: 2016-10-06 06:07 GMT

ಕುವೈಟ್ ಸಿಟಿ, ಅ.6: ಮೊಬೈಲ್ ಫೋನ್, ಲ್ಯಾಪ್‌ಟಾಪ್‌ಗಳಲ್ಲಿ ಕಾನೂನು ಬಾಹಿರ ವಿಷಯಗಳಿದದ್ವು ಎಂದು ಅರೋಪಿಸಿ 24 ಮಂದಿಕುವೈಟ್ ಪ್ರಜೆಗಳನ್ನು ಅಮೆರಿಕದಲ್ಲಿ ಬಂಧಿಸಲಾಗಿದ್ದು, ಇವರಲ್ಲಿ ಹೆಚ್ಚಿನವರು ವಿದ್ಯಾರ್ಥಿಗಳೆಂದು ವರದಿಯಾಗಿದೆ.

ಉಳಿದವರು ಪ್ರವಾಸಾರ್ಥ ಅಮೆರಿಕಕ್ಕೆ ಭೇಟಿ ನೀಡಿದವರಾಗಿದ್ದಾರೆ. ಹದಿನೆಂಟು ವರ್ಷ ಕೆಳಗಿನ ವಯೋಮಾನದವರ ಅಶ್ಲೀಲ ಚಿತ್ರಗಳನ್ನು ತಮ್ಮ ಬಳಿ ಇರಿಸಿಕೊಂಡಿರುವುದಕ್ಕಾಗಿ ಇವರನ್ನು ಬಂಧಿಸಲಾಗಿದೆ. ಇನ್ನು ಕೆಲವರನ್ನು ತೀವ್ರವಾದಿ ಚಿಂತನೆಗಳನ್ನು ಬೆಳೆಸುವ ಆಶಯಗಳನ್ನು ಮತ್ತು ಚಿತ್ರಗಳನ್ನು ಇರಿಸಿಕೊಂಡಿದ್ದಾರೆ ಎನ್ನುವ ಕಾರಣಕ್ಕಾಗಿ ಬಂಧಿಸಲಾಗಿದೆ.

ಅಮೆರಿಕದಲ್ಲಿ ಹದಿನೆಂಟು ವರ್ಷಕ್ಕಿಂತ ಕೆಳವಯೋಮಾನದವರ ಅಶ್ಲೀಲ ಚಿತ್ರಗಳನ್ನು ಹೊಂದುವುದು ಅಪರಾಧವಾಗಿದೆ. ಅದೇ ವೇಳೆ ಅಮೆರಿಕನ್ ಕಸ್ಟಂಸ್ ಅಧಿಕಾರಿಗಳು ಚಾರಿತ್ರ್ಯ ಹನನ ಮಾಡುತ್ತಿದ್ದಾರೆ. ಕಾನೂನು ವಿರುದ್ಧವಾಗಿ ನಮ್ಮ ಬಳಿ ಏನೂ ಇರಲಿಲ್ಲ ಎಂದು ಕುವೈಟ್ ಪ್ರಜೆಗಳು ಹೇಳಿದ್ದಾರೆ.

ಇತರದೇಶಗಳಲ್ಲಿ ಅಶ್ಲೀಲ ಎಂದು ಅನಿಸದಿರುವ ಚಿತ್ರಗಳು ಅಮೆರಿಕದ ಅಧಿಕಾರಿಗಳಿಗೆ ಅಶ್ಲೀಲವೆಂದು ಹೇಗೆ ಅನಿಸುತ್ತದೆಯೆಂದಾದರೆ ಅವರ ನಿಲುವು ಸತ್ಯಸಂಧವಾದುದಲ್ಲ ಎಂದು ಕುವೈಟ್ ಪ್ರಜೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾನೂನು ವಿರುದ್ಧವಾದ ವಿಷಯಗಳು ನಮ್ಮ ಫೋನ್‌ನಲ್ಲಿ ಅಥವಾ ಲ್ಯಾಪ್‌ಟಾಪ್‌ಗಳಿರಲಿಲ್ಲ ಎಂದು ದೃಢಪಡಿಸಿದ ಮೇಲೆಯೇ ಅಮೆರಿಕ ಸಂದರ್ಶನಕ್ಕೆ ಬರಬೇಕೆಂದು ಈ ಹಿಂದೆಯೇ ವಾಷಿಂಗ್ಟನ್‌ನ ಕುವೈಟ್ ರಾಯಭಾರ ಕಚೇರಿ ತಮ್ಮ ಪ್ರಜೆಗಳಿಗೆ ಮುನ್ನೆಚ್ಚರಿಕೆಯನ್ನು ನೀಡಿತ್ತುಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News