×
Ad

ಬ್ರಿಟನ್:ವಸತಿರಹಿತರಿಗೆ ಹಣಕೊಡಿ; ಪ್ರಧಾನಿಯನ್ನು ವಿನಂತಿಸಿದ 5ವರ್ಷದ ಪೋರಿ

Update: 2016-10-06 12:04 IST

  ಲಂಡನ್, ಅ.6: ಬ್ರಿಟನ್‌ನಲ್ಲಿರುವ ವಸತಿರಹಿತರನ್ನು ಬೆಂಬಲಿಸಲಿಕ್ಕಾಗಿ ಪ್ರಧಾನಮಂತ್ರಿ ತೆರೆಸಾ ಮೇಯವರನ್ನು ಉದ್ದೇಶಿಸಿ ನೇರವಾಗಿ ಐದುವರ್ಷದ ಪೋರಿಯೊಬ್ಬಳು ಮಾತಾಡುವ ವೀಡಿಯೊ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ ಎಂದು ವರದಿಯಾಗಿದೆ."ನನ್ನ ಹೆಸರು ಬ್ರೂಕ್ ಬ್ಲೇರ್.ಐದು ವರ್ಷ ವಯಸ್ಸು ನನಗೆ. ನಾನು ಪ್ರಧಾನಿ ತೆರೆಸಾರೊಂದಿಗೆ ಕೆಲವು ಮಾತುಗಳನ್ನು ಹೇಳಬೇಕಾಗಿದೆ. ಕಳೆದ ದಿವಸ ರಾತ್ರಿ ನಗರದ ಹೊರಗೆ ಹೋದಾಗ ಮನೆಯಿಲ್ಲದೆ ಬೀದಿಯಲ್ಲಿ ರಾತ್ರಿ ಕಳೆಯುವ ಲಕ್ಷಾಂತರ ಮಂದಿಯನ್ನು ನೋಡಿದೆ. ಅವರ ಕಣ್ಣುಗಳಲ್ಲಿ ಭಯ ಮಾತ್ರ ನರಳಾಡುತ್ತಿವೆ. ಅವರಲ್ಲಿ ಹಸಿವು ನೀಗಿಸಲು ಏನೂ ಇಲ್ಲ. ನಿಮಗೆ ತಿನ್ನಲು ಬಿಸ್ಕತ್ತು ಇವೆ. ಚಾಕ್ಲೆಟ್ ಮತ್ತು ಸ್ಯಾಂಡ್‌ವಿಚ್ ಇವೆ. ಮಲಗಿ ನಿದ್ರಿಸಲು ಸೂರಿಲ್ಲ. ನನಗೆ ಐದು ವರ್ಷ ಮಾತ್ರ ಆಗಿದೆ. ಅವರಿಗಾಗಿ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅವರಿಗೆ ಕೊಡಲು ಸ್ವಲ್ಪನನ್ನ ಕೈಯಲ್ಲಿದ್ದರೂ ಅದರಿಂದ ಏನೂ ಆಗುವುದಿಲ್ಲ. ನಿಮ್ಮಲ್ಲಿ ಬೇಕಾದಷ್ಟು ಹಣ ಇದೆಯಲ್ವಾ? ಅದರಿಂದ ಸ್ವಲ್ಪಕೊಟ್ಟು ಅವರನ್ನು ಸಹಾಯ ಮಾಡಿ" ಮಗುವಿನ ಅಮ್ಮ ವೀಡಿಯೊವನ್ನು ಯೂಟ್ಯೂಬ್‌ಗೆ ಹಾಕಿದ್ದಾರೆ.ಯುಟ್ಯೂಬ್‌ನಲ್ಲಿದ್ದ ವೀಡಿಯೊವನ್ನು ಸಾವಿರಾರು ಮಂದಿ ಶೇರ್ ಮಾಡಿದ್ದಾರೆಂದು ವರದಿ ತಿಳಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News